ರವಿ ಬೆಳಗೆರೆ ಸುಪಾರಿ ಕೇಸ್ | 14 ದಿನಗಳ ನ್ಯಾಯಾಂಗ ಬಂಧನ | Oneindia Kannada

  • 7 years ago
Supari to Kill Journalist Sunil : Journalist Ravi Belagere sent to 14 days judicial custody by 1st ACMM court Judge Jagadish. Ravi Belagere will be under judicial custody till December 23, 2017.


ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಅವರ ಹತ್ಯೆಗೆ ಸುಪಾರಿ ನೀಡಿದ ಆರೋಪ ಎದುರಿಸುತ್ತಿರುವ ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.1ನೇ ಎಸಿಎಂಎಂ ನ್ಯಾಯಾಧೀಶ ಜಗದೀಶ್ ಅವರು ರವಿ ಬೆಳಗೆರೆಗೆ ಡಿಸೆಂಬರ್ 23ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.ಸುಪಾರಿ ಕೇಸಿಗೆ ಸಂಬಂಧಿಸಿದಂತೆ ರವಿ ಬೆಳಗೆರೆ ಅವರು ಕಳೆದ ನಾಲ್ಕು ದಿನಗಳ ಸಿ.ಸಿ.ಬಿ. ಅಧಿಕಾರಿಗಳ ವಶದಲ್ಲಿದ್ದರು. ರವಿ ಬೆಳಗೆರೆ ಅವರನ್ನು ಸೋಮವಾರದಂದು ಕೋರ್ಟಿಗೆ ಹಾಜರುಪಡಿಸಲಾಯಿತು. ಆದರೆ, ಹೆಚ್ಚಿನ ವಿಚಾರಣೆಗೆಗಾಗಿ ತಮ್ಮ ಕಸ್ಟಡಿಗೆ ನೀಡುವಂತೆ ಮನವಿ ಮಾಡಿಕೊಳ್ಳಲಿಲ್ಲ.ಅನಾರೋಗ್ಯದ ಹಿನ್ನಲೆಯಲ್ಲಿ ರವಿ ಬೆಳಗೆರೆ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡುವಂತೆ ರವಿ ಬೆಳಗೆರೆ ಅವರ ವಕೀಲ ದಿವಾಕರ್ ಅವರು ಅರ್ಜಿ ಸಲ್ಲಿಸುವ ನಿರೀಕ್ಷೆಯಿತ್ತು. ಆದರೆ, ಜಾಮೀನು ಅರ್ಜಿಯನ್ನು ಬುಧವಾರ ಸಲ್ಲಿಸಲಾಗುವುದು ಎಂದರು.'ರವಿ ಬೆಳಗೆರೆ ಪ್ರತಿದಿನ ಇಂಜೆಕ್ಷನ್ ತೆಗೆದುಕೊಳ್ಳಬೇಕು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು ಎಂದು 60 ಪುಟಗಳ ವೈದ್ಯಕೀಯ ವರದಿಯನ್ನು ಕೋರ್ಟ್ ಮುಂದೆ ದಾಖಲೆ ಮಾತ್ರ ಸಲ್ಲಿಸಲಾಗಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿ ಸೂಕ್ತ ವೈದ್ಯಕೀಯ ವ್ಯವಸ್ಥೆ ಕಲ್ಪಿಸುವಂತೆ ಮಾತ್ರ ಕೋರಲಾಗಿದೆ ಎಂದು ವಕೀಲ ದಿವಾಕರ್ ಅವರು ಹೇಳಿದರು.