ಡಿಸೆಂಬರ್ 31, 2017 : ಕೇರಳ ವಿಜ್ಞಾನಿ ಪ್ರಕಾರ, ಭಾರತ ದೊಡ್ಡ ನೈಸರ್ಗಿಕ ವಿಕೋಪ ಎದುರಿಸಬಹುದು | Oneindia Kannada

  • 7 years ago
ಡಿ.31 ರೊಳಗೆ ಸುನಾಮಿ! ಅತೀಂದ್ರಿಯ ಶಕ್ತಿಯ ಬಾಬು ಕಳಾಯಿಲ್ ಎಚ್ಚರಿಕೆ! ಈ ವರ್ಷ ಅಂದರೆ 2017 ರ ಡಿಸೆಂಬರ್ 31 ರೊಳಗೆ ಅತ್ಯಂತ ಭೀಕರ ಭೂಕಂಪ ಮತ್ತು ಸುನಾಮಿಯನ್ನು ಭಾರತ ಸೇರಿದಂತೆ 11 ದೇಶಗಳು ಎದುರಿಸುತ್ತವೆ ಎಂಬ ಆಘಾತಕಾರಿ ಸುದ್ದಿಯನ್ನು ಕೇರಳದ ವಿಜ್ಞಾನಿಯೊಬ್ಬರು ನೀಡಿದ್ದಾರೆ.ನಾಲ್ಕು ದಿನಕ್ಕೊಮ್ಮೆ ಪ್ರಳಯದ ಗುಲ್ಲೆಬ್ಬಿಸುತ್ತಿರುವ ಈ ಕಾಲದಲ್ಲಿ ಯಾವುದನ್ನು ನಂಬಬೇಕೋ, ಬಿಡಬೇಕೋ ದೇವರೇ ಬಲ್ಲ. ಆದರೆ ಕೇರಳದ ಬಿ.ಕೆ.ರೀಸರ್ಚ್ ಅಸೋಸಿಯೇಶನ್ ನ ಬಾಬು ಕಳಾಯಿಲ್ ಎಂಬುವವರು ಅತೀಂದ್ರಿಯ ಶಕ್ತಿ ಮತ್ತು ಕೆಲ ವೈಜ್ಞಾನಿಕ ಅಧ್ಯಯನದಿಂದಾಗಿ ಡಿಸೆಂಬರ್ 31, ಯಾರೂ ನಿರೀಕ್ಷಿಸಿರದ ಮಟ್ಟಿನ ನೈಸರ್ಗಿಕ ವಿಕೋಪವೊಂದು ಸಂಭವಿಸುತ್ತದೆ ಎಂಬ ಬಾಂಬ್ ಸಿಡಿಸಿದ್ದಾರೆ.ಅಷ್ಟೇ ಅಲ್ಲ, ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರಿಗೂ ಅವರು ಪತ್ರ ಸಹ ಬರೆದಿದ್ದಾರೆ. ಈ ಪತ್ರವನ್ನು ಅವರು ಪ್ರಧಾನಿ ಮೋದಿಯವರಿಗೆ ಸೆಪ್ಟೆಂಬರ್ ನಲ್ಲೇ ಬರೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಪತ್ರಕ್ಕೆ ಪ್ರಧಾನಿ ಕಡೆಯಿಂದ ಯಾವ ಪ್ರತಿಕ್ರಿಯೆ ಸಿಕ್ಕಿದೆ ಎಂಬ ಮಾಹಿತಿಯಿಲ್ಲ.