Skip to playerSkip to main contentSkip to footer
  • 11/8/2017
ಓಹೋ.! ಮಾಜಿ ಪ್ರೇಯಸಿ ಅನುಪಮಾ ರನ್ನ ತಬ್ಬಿಕೊಂಡು, ಮುತ್ತು ಕೊಟ್ಟ ಜಗನ್ನಾಥ್.! ಒಂದು ಕಾಲದಲ್ಲಿ ಪ್ರೇಮ ಪಕ್ಷಿಗಳಂತೆ ಹಾರಾಡಿದ್ದ ಕಿರುತೆರೆ ನಟ ಜಗನ್ನಾಥ್ ಹಾಗೂ ನಟಿ ಅನುಪಮಾ ಗೌಡ ರವರ ಪ್ರೀತಿ ಈಗ ಮುರಿದು ಬಿದ್ದಿದೆ, ನಿಜ. ಎರಡು ವರ್ಷಗಳ ಹಿಂದೆ ಬ್ರೇಕಪ್ ಆಗಿದ್ದ ಅನುಪಮಾ ಗೌಡ ಹಾಗೂ ಜಗನ್ನಾಥ್ ಈಗ 'ಬಿಗ್ ಬಾಸ್' ಮನೆ ಸೇರಿದ್ದಾರೆ. ಮಾಜಿ ಪ್ರೇಯಸಿ ಅನುಪಮಾ ಗೌಡ ಎದುರಿಗೆ ಓಡಾಡುತ್ತಿದ್ದರೂ, ''ಸಂಬಂಧವೇ ಇಲ್ಲ'' ಎಂಬಂತೆ ಕೃಷಿ ತಾಪಂಡ, ಆಶಿತಾ ಚಂದ್ರಪ್ಪ ಜೊತೆ ಹಾಯಾಗಿದ್ದಾರೆ ಮಿಸ್ಟರ್ ಜಗನ್ನಾಥ್.ಇನ್ನೂ, ''ಜಗನ್ನಾಥ್ ಪತ್ನಿಯಾಗಬೇಕು'' ಎಂದು ಆಸೆ ಪಟ್ಟಿದ್ದ ಅನುಪಮಾ ಗೌಡ ಮಾತ್ರ ಆಗಾಗ ಹಳೆಯದನ್ನೆಲ್ಲ ನೆನಪಿಸಿಕೊಂಡು ಕಣ್ಣೀರಿಡುತ್ತಿರುತ್ತಾರೆ. ಪರಿಸ್ಥಿತಿ ಹೀಗಿರುವಾಗಲೇ, ಇದಕ್ಕಿದ್ದಂತೆ ಮಾಜಿ ಪ್ರೇಯಸಿ ಅನುಪಮಾ ಬಳಿ ತೆರಳಿ, ಆಕೆಯನ್ನ ತಬ್ಬಿಕೊಂಡು, ಮುತ್ತು ಕೊಟ್ಟಿದ್ದಾರೆ ಜಗನ್ನಾಥ್.!

Recommended