Skip to playerSkip to main contentSkip to footer
  • 1/17/2025
ಚಾಮರಾಜನಗರ : ರಸ್ತೆಯಲ್ಲಿ ಹಾಕಿದ್ದ ಹುರುಳಿ ಸೆತ್ತೆ ಚಕ್ರಕ್ಕೆ ಸುತ್ತಿಕೊಂಡ ಪರಿಣಾಮ ಬೆಂಕಿ ಹೊತ್ತಿಕೊಂಡು ಕಾರು ಧಗಧಗನೆ ಉರಿದ ಘಟನೆ ಚಾಮರಾಜನಗರ ಗಡಿಭಾಗದಲ್ಲಿರುವ ತಮಿಳುನಾಡಿನ ಮೆಟ್ಲವಾಡಿ ಬಳಿ ನಡೆದಿದೆ.ತಮಿಳುನಾಡಿನ ಧರ್ಮಪುರಂನ ಕಾಳಸ್ವಾಮಿ ಕುಟುಂಬವು ಸಂಕ್ರಾಂತಿ ಹಿನ್ನೆಲೆ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿಗೆ ಸಂಬಂಧಿಕರ ಮನೆಗೆ ಬಂದಿದ್ದರು. ಇಂದು ವಾಪಾಸ್ ತಮಿಳುನಾಡಿಗೆ ತೆರಳುವಾಗ ಚಾಮರಾಜನಗರ ತಾಲೂಕಿನ ಬಿಸಲವಾಡಿ ಸಮೀಪದ ತಮಿಳುನಾಡಿಗೆ ಸೇರಿದ ಮೆಟ್ಲವಾಡಿ ಬಳಿ ಕಾರಿನ ಚಕ್ರಕ್ಕೆ ಹುರುಳಿ ಸೆತ್ತೆ ಸುತ್ತಿಕೊಂಡಿದೆ. ನಂತರ ನೋಡನೋಡುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿದೆ.ಈ ವೇಳೆ ದಟ್ಟ ಹೊಗೆ ಉಂಟಾದ ಹಿನ್ನೆಲೆ ಕಾರನ್ನು ರಸ್ತೆಬದಿಗೆ ನಿಲ್ಲಿಸಿ ಕಾರಿನಲ್ಲಿದ್ದ 7 ಮಂದಿಯೂ ಕೆಳಕ್ಕಿಳಿಯುತ್ತಿದ್ದಂತೆ ಕಾರು ಧಗಧಗನೆ ಹೊತ್ತಿ ಉರಿದಿದೆ. ರಸ್ತೆಯಲ್ಲಿ ಹುರುಳಿ ಒಕ್ಕಣೆ ಮಾಡುತ್ತಿದ್ದರಿಂದಾಗಿ ಈ ಎಡವಟ್ಟು ಉಂಟಾಗಿದ್ದು, ತಮಿಳುನಾಡಿನ ತಾಳವಾಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದನ್ನೂ ಓದಿ :  ದಿಢೀರ್ ಹೊತ್ತಿ ಉರಿದ ಚಲಿಸುತ್ತಿದ್ದ ಕಾರು, ಪ್ರಾಣಾಪಾಯದಿಂದ ವಕೀಲರ ಕುಟುಂಬ ಪಾರು - ಇಂಜಿನ್​ನಲ್ಲಿ ಬೆಂಕಿ

Category

🗞
News

Recommended