ಮೂಲ ಅನುಭವ ಮಂಟಪಕ್ಕಾಗಿ ಇಂದು ಬೃಹತ್ ಸಮಾವೇಶ | Anubhava Mantapa Issue

  • 2 years ago
ಬೀದರ್‌ನ ಬಸವಕಲ್ಯಾಣದಲ್ಲಿ ಇಂದು ಮಠಾಧೀಶರ ಬೃಹತ್ ಸಮಾವೇಶ ನಡೆಯಲಿದೆ. ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣದಲ್ಲಿ ಮೂಲ ಅನುಭವ ಮಂಟಪದ ಕೂಗು ಜೋರಾಗಿದ್ದು ಧರ್ಮ ದಂಗಲ್‌ಗೆ ಕಾರಣವಾಗುತ್ತಿದೆ. ಈಗಿನ ಫೀರ್ ಪಾಶಾ ದರ್ಗಾ ಅಂದಿನ ಮೂಲ ಅನುಭವ ಮಂಟಪವಾಗಿತ್ತು ಎಂಬ ವಾದದೊಂದಿಗೆ ಮೂಲ ಅನುಭವ ಮಂಟಪ ಸಂರಕ್ಷಣೆಯಾಗಬೇಕು ಎಂದು ವಿವಿಧ ಮಠಾಧೀಶರು ಹಾಗೂ ಸಾವಿರಾರು ಬಸವ ಭಕ್ತರು ಹೋರಾಟಕ್ಕೆ ಇಳಿದ್ದಾರೆ. ಇಂದು ಬಸವಕಲ್ಯಾಣ ಥೇರು ಮೈದಾನದ ಸಭಾ ಭವನದಲ್ಲಿ ಮಠಾಧೀಶ ನಡೆ ಮೂಲ ಅನುಭವ ಮಂಟಪದ ಕಡೆ ಎಂಬ ಬೃಹತ ಸಮಾವೇಶ ಹಮ್ಮಿಕೊಳ್ಳಲಾಗಿದೆ. ತಡೋಳ ಮಠದ ರಾಜಶೇಖರ ಶಿವಾಚಾರ್ಯರ ನೇತೃತ್ವದಲ್ಲಿ ನೂರಾರು ಮಠಾಧೀಶರು ಹಾಗೂ ೧೦ ರಿಂದ ೧೫ ಸಾವಿರ ಬಸವ ಭಕ್ತರು ಕಾರ್ಯಕ್ರಮಕ್ಕೆ ಸಾಕ್ಷಿಯಾಗುವ ನೀರಿಕ್ಷೆ ಇದೆ. ತೆಲಂಗಾಣ, ಮಹಾರಾಷ್ಟç, ರಾಜ್ಯದ ಮೂಲೆ ಮೂಲೆಯಿಂದ ಮಠಾಧೀಶರು, ಸ್ವಾಮೀಜಿಗಳು, ಜನಪ್ರತಿನಿಧಿಗಳು ಹಾಗೂ ಬಸವ ಭಕ್ತರು ಬರಲಿದ್ದಾರೆ. ಶ್ರೀರಾಮ್ ಸೇನೆಯ ಸಂಸ್ಥಾಪಕ ಪ್ರಮೋದ ಮುತಾಲಿಕ್ ಸಹ ಸಮಾವೇಶದ ನೇತೃತ್ವ ವಹಿಸಲಿದ್ದಾರೆ.ಅಂದೋಲ ಶ್ರೀಗಳು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಇಂದು ಬಸವಕಲ್ಯಾಣಕ್ಕೆ ಬರುವ ಮಠಾಧೀಶರು ೧೦ ಗಂಟೆಗೆ ಕಲ್ಯಾಣದ ಬಸವ ಕೇಂದ್ರದಲ್ಲಿ ಸಾಮೂಹಿಕವಾಗಿ ಇಷ್ಟಲಿಂಗ ಪೂಜೆ ಮಾಡಲಿದ್ದಾರೆ. ಬಳಿಕ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಥೇರು ಮೈದಾನದ ಸಭಾ ಭವನಕ್ಕೆ ಬರಲಿದ್ದಾರೆ. ಬಳಿಕ ಸಭಾ ಭವನದಲ್ಲಿ ಸೇರಿದ ನೂರಾರು ಮಠಾಧೀಶರು ಹಾಗೂ ಸ್ವಾಮೀಜಿಗಳು ಮೂಲ ಅನುಭವ ಮಂಟಪದ ಹೋರಾಟದ ಬಗ್ಗೆ ಚಿಂತನ - ಮಂಥನ ಮಾಡಿ ಹೋರಾಣದ ರೂಪರೇಷೆಗಳನ್ನು ರೂಪಿಸಲಿದ್ದಾರೆ.

#publictv #bidar #anubhavamantapa