ಕೊರೊನಾವೈರಸ್ ಆರ್ಭಟ ಶುರುವಾದಾಗಿನಿಂದ ಜನರಿಗೆ ಚಿಕ್ಕದಾಗಿ ಕೆಮ್ಮು ಬಂದರೂ, ಸಾಮಾನ್ಯ ಜ್ವರ ಬಂದರೂ ಅದು ಕೋವಿಡ್ 19 ಭಯವಿರಬಹುದೇ ಎಂಬ ಆತಂಕ ಶುರುವಾಗುವುದು. ಇನ್ನು ಆಸ್ಪತ್ರೆಗಳಲ್ಲಿಯೂ ಸಾಮಾನ್ಯ ಜ್ವರವೆಂದು ಹೋದರೂ ಕೋವಿಡ್ 19 ಪರೀಕ್ಷೆ ಮಾಡಿಸುವಂತೆ ಸೂಚಿಸುವುದರಿಂದ ನಮಗೆ ಬಂದಿರುವುದು ಸಾಮಾನ್ಯ ಜ್ವರವೇ ಅಥವಾ ಕೋವಿಡ್ 19 ಇರಬಹುದೇ ಎಂಬ ಆತಂಕ ಜನರಿಗೆ ಕಾಡುವುದು ಸಹಜ. ಜ್ವರ, ಕೆಮ್ಮು, ಉಸಿರಾಟದಲ್ಲಿ ತೊಂದರೆ ಇದು ಕೋವಿಡ್ 19ನ ಪ್ರಮುಖ ಲಕ್ಷಣಗಳಾದರೂ ಕೆಲವರಿಗೆ ಮೈ ತುಂಬಾ ಚಳಿಯಾಗುವುದು ಅಥವಾ ಶೀತ ಇಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಕೊರೊನಾವೈರಸ್ ಸೋಂಕು ತಗುಲಿದ 14 ದಿನಗಳ ಒಳಗಾಗಿ ರೋಗದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಕೆಲವರಿಗೆ ಇದರಲ್ಲಿರುವ ಎಲ್ಲಾ ಲಕ್ಷಣಗಳು ಕಾಣಿಸಿಕೊಂಡರೆ ಇನ್ನು ಕೆಲವರಿಗೆ ಕೆಲವೊಂದಿಷ್ಟು ಲಕ್ಷಣಗಳು ಮಾತ್ರ ಕಾಣಿಸಿಕೊಳ್ಳಯತ್ತದೆ ಎಂದು ಸೆಂಟರ್ ಫಾರ್ ಡಿಸೀಜ್ ಕಂಟ್ರೋಲ್ ಅಂಡ್ ಪ್ರಿವೆನ್ಸಷನ್ ಹೇಳಿದೆ. ಇಲ್ಲಿ ನಾವು ಕೊರೊನಾವೈರಸ್ 10 ಲಕ್ಷಣಗಳ ಬಗ್ಗೆ ಹೇಳಿದ್ದೇವೆ ಹಾಗೂ ನಿಮ್ಮನ್ನು ಹಾಗೂ ನಿಮ್ಮ ಕುಟುಂಬವನ್ನು ಕೊರೊನಾವೈರಸ್‌ನಿಂದ ಕಾಪಾಡಲು ಏನು ಮಾಡಬೇಕೆಂಬ ಸಲಹೆ ನೀಡಿದ್ದೇವೆ ನೋಡಿ:
Category
🛠️
Lifestyle