ಎಲ್ ಕೆ ಅಡ್ವಾಣಿ ಶುಭಾಶಯ ಕೋರುವ ವೇಳೆಯಲ್ಲೂ ಸಿದ್ದರಾಮಯ್ಯ ರಾಜಕೀಯ | Oneindia Kannada

  • 6 years ago
Former Karnataka CM Siddaramaiah funny birthday wish tweet to L K Advani. Siddaramaiah tweeted, "Your guidance is required in protecting our democracy which is in grave danger, than in Marg-Darshak Mandal which do not respect your experience & seniority".

ಬಿಜೆಪಿಯ ಹಿರಿಯ ಮುಖಂಡ, ಉಕ್ಕಿನ ಮನುಷ್ಯ ಎಂದೇ ಕರೆಯಲ್ಪಡುವ ಎಲ್ ಕೆ ಅಡ್ವಾಣಿಗೆ ಇಂದು (ನ 8) 91ನೇ ವಸಂತದ ಸಂಭ್ರಮ. ಬ್ರಿಟಿಷರ ಕಾಲದಲ್ಲಿ ಮುಂಬೈ ಪ್ರಾಂತ್ಯದ ಭಾಗವಾಗಿದ್ದ ಈಗಿನ ಪಾಕಿಸ್ತಾನದ ಕರಾಚಿಯಲ್ಲಿ 08.11.1927ರಲ್ಲಿ ಅಡ್ವಾಣಿ ಜನಿಸಿದ್ದು. ಪಕ್ಷಾತೀತವಾಗಿ ಎಲ್ಲರೂ ಮೆಚ್ಚುವ ಅಡ್ವಾಣಿಯವರ ಹುಟ್ಟುಹಬ್ಬದ ದಿನದಂದು ಪ್ರಧಾನಿಯಾದಿಯಾಗಿ ಎಲ್ಲರೂ ಶುಭಾಶಯ ಕೋರಿದ್ದಾರೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ, ಅಡ್ವಾಣಿಯವರಿಗೆ ವಿಷ್ ಮಾಡುತ್ತಾ, ಮೋದಿ ಮತ್ತು ಬಿಜೆಪಿಯ ಕಾಲೆಳೆದಿದ್ದಾರೆ. ಸಿದ್ದರಾಮಯ್ಯ ಟ್ವೀಟಿಗೆ ಕೆಲವೊಂದು ಭರ್ಜರಿ ತಿರುಗೇಟು ಕೂಡಾ ಟ್ವಿಟ್ಟಿಗರಿಂದ ಬಂದಿದೆ.