ಬಡ ಹುಡುಗಿಯ ಶಿಕ್ಷಣಕ್ಕೆ ನೆರವಾದ ಹೆಚ್ ಡಿ ಕುಮಾರಸ್ವಾಮಿ | Oneindia Kannada

  • 6 years ago
Karnataka Chief Minister H.D.Kumaraswamy will help for the poor girl education. Kumaraswamy identified poor girl on August 29, 2018 who selling flower in the Belagola village of Srirangapatna.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಎಲ್ಲರಂತಲ್ಲ, ಅವರು ಭಾವನಾಜೀವಿ. ಇದು ಇಂದು ಮತ್ತೊಮ್ಮೆ ಸಾಬೀತಾಗಿದೆ. ರಸ್ತೆ ಬದಿ ಹೂ ಮಾರುತ್ತಾ ನಿಂತಿದ್ದ ಬಾಲಕಿಗೆ ಶಿಕ್ಷಣ ಕೊಡಿಸಲು ಅವರು ನೆರವಾಗಲಿದ್ದಾರೆ. ಮುಖ್ಯಮಂತ್ರಿಗಳು ಇಂದು ರಾಮನಗರ ಜಿಲ್ಲಾ ಪ್ರವಾಸ ಕೈಗೊಂಡಿದ್ದರು. ಕೆ.ಆರ್‌.ಎಸ್‌ನಿಂದ ಅವರು ರಾಮನಗರಕ್ಕೆ ಅವರು ಕಾರಿನಲ್ಲಿ ತೆರಳುತ್ತಿದ್ದರು. ಆಗ ಶ್ರೀರಂಗಪಟ್ಟಣದಲ್ಲಿ ರಸ್ತೆ ಬದಿಯಲ್ಲಿ ಹೂ ಮಾರುತ್ತಿದ್ದ ಮಗುವನ್ನು ನೋಡಿದ್ದಾರೆ.ಹೂವನ್ನು ಮಾರುತ್ತ ನಿಂತಿದ್ದ ಮಗುವಿನ ಹೆಸರು ಶಾಬಾಬ್ತಾಜ್. ಬಾಲಕಿಯ ತಂದೆ-ತಾಯಿಯ ಬಗ್ಗೆ ವಿಚಾರಿಸಿದ ಕುಮಾರಸ್ವಾಮಿ ಅವರು ತಂದೆಯನ್ನು ಬಂದು ತಮ್ಮನು ಕಾಣುವಂತೆ ತಿಳಿಸು ಎಂದು ಹೇಳಿದ್ದಾರೆ. ನಿನ್ನ ವಿದ್ಯಾಬ್ಯಾಸಯಕ್ಕೆ ಸಹಾಯಮಾಡುವುದಾಗಿ ಭರವಸೆ ನೀಡಿದ್ದಾರೆ.