ಅಮಿತ್ ಶಾ ಬಂದ ನಂತರ ಬಿಜೆಪಿ ಸ್ಟೈಲೇ ಬೇರೆ: ಸತೀಶ್ ರೆಡ್ಡಿ ಸಂದರ್ಶನ | Oneindia Kannada

  • 6 years ago
ಹತ್ತು ವರ್ಷಗಳ ಹಿಂದೆ ಕ್ಷೇತ್ರ ವಿಂಗಡಣೆಯಾದ ನಂತರ ಅಸ್ತಿತ್ವಕ್ಕೆ ಬಂದ ಬೆಂಗಳೂರು ನಗರದ ಬೊಮ್ಮನಹಳ್ಳಿ ಕ್ಷೇತ್ರವನ್ನು ಸತತ ಎರಡು ಬಾರಿ ಪ್ರತಿನಿಧಿಸುತ್ತಿರುವವರು ಬಿಜೆಪಿಯ ಶಾಸಕ ಎಂ ಸತೀಶ್ ರೆಡ್ಡಿ. ಈ ಬಾರಿಯ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿಯಾಗಿರುವ ಸತೀಶ್ ರೆಡ್ಡಿಗೆ, ಕಾಂಗ್ರೆಸ್ಸಿನ ಸುಷ್ಮಾ ರಾಜಗೋಪಾಲ ರೆಡ್ಡಿ ಪ್ರತಿಸ್ಪರ್ಧಿ. ನಾನು ಮಾಡಿದ ಅಭಿವೃದ್ದಿ ಕೆಲಸವೇ ನನಗೆ ಶ್ರೀರಕ್ಷೆ ಎಂದು ಗೆಲ್ಲುವ ಖಚಿತ ಭರವಸೆಯಲ್ಲಿರುವ ಸತೀಶ್ ರೆಡ್ಡಿ, ಚುನಾವಣೆಯ ಈ ಸಂದರ್ಭದಲ್ಲಿ 'ಒನ್ ಇಂಡಿಯಾ' ಜೊತೆ ಮಾತುಕತೆ ನಡೆಸಿದ್ದಾರೆ. ಅವರ ಸಂದರ್ಶನದ ಆಯ್ದ ಭಾಗ..