ವ್ಯಾಲೆಂಟೈನ್ಸ್ ಡೇ ಸ್ಪೆಷಲ್ : ನಿಮ್ಮ ರಾಶಿ ಭವಿಷ್ಯದಲ್ಲಿ ಏನಿದೆ | Oneindia Kannada

  • 6 years ago
Valentines day special astrology for zodiac signs for the year 2018. What vedic astrology says about proposal of love to 12 zodiac signs, well known astrologer Pandit Vittala Bhat explains in Kannada.


ಫೆಬ್ರವರಿ ಹದಿನಾಲ್ಕನೇ ತಾರೀಕು ಪ್ರೇಮಿಗಳ ದಿನ. ಯಾವ ದಿನ ಪ್ರೇಮಿಗಳದಲ್ಲ ಹೇಳಿ. ಆದರೂ ಪ್ರೇಮ ನಿವೇದನೆಗೆ ಹಾಗೂ ತಮ್ಮ ಪ್ರೀತಿಯನ್ನು ಉತ್ಕಟವಾಗಿ ತೋರಿಸಿಕೊಳ್ಳ ಬಯಸುವವರಿಗೆ ಅಂತ ಈ ದಿನ ಮೀಸಲಿಟ್ಟಿರಬಹುದು. ಗಾಂಧರ್ವ ವಿವಾಹ ಅಂದರೆ ಏನು ಅಂತ ತಿಳಿದುಕೊಂಡರೆ ಯಾರಿಗಾದರೂ ಸರಿ, ನಮ್ಮ ಹಿರಿಯರು ಒಲವಿಗೆ ನೀಡಿದ ಮಹತ್ವ ತಿಳಿಯುತ್ತದೆ. ಇನ್ನು ಪರಸ್ಪರ ಗಂಡು- ಹೆಣ್ಣು ಮೆಚ್ಚಿಕೊಂಡ ಮೇಲೆ ಅಂದರೆ ಪರಸ್ಪರರು ಪ್ರೀತಿಸುತ್ತಿದ್ದರೆ ಜಾತಕ ಮತ್ತೊಂದು ನೋಡಲೇಬೇಡಿ ಎಂದು ಮಹಾ ಋಷಿಯೊಬ್ಬರು ಹೇಳಿದ್ದಾರೆ. ಇದರರ್ಥ ಏನೆಂದರೆ ಪರಸ್ಪರ ಗಂಡು- ಹೆಣ್ಣು ಪ್ರೀತಿಸುವುದಕ್ಕೆ ನಮ್ಮ ಹಿರಿಯರ ತಕರಾರು ಏನಿರಲಿಲ್ಲ. ಆದರೆ ಸ್ವೇಚ್ಛಾಚಾರ ತರವಲ್ಲ ಎಂಬುದು ಅದರ ತಿರುಳಾಗಿತ್ತು.