ಪಾಕಿಸ್ತಾನ ಕೊನೆಗೂ ಹಫೀಜ್ ಸಯೀದ್ ವಿಷ್ಯದಲ್ಲಿ ಮಹತ್ವದ ನಿರ್ಧಾರ | Oneindia Kannada

  • 6 years ago
Pakistan's President on Monday (Feb 12) signed an ordinance that brings all individuals and organizations banned by the UN Security Council, including 26/11 attacks mastermind Hafiz Saeed and his group, the Jamaat-ud-Dawa (JuD).

ಯಾರು ಏನೇ ಹೇಳಿದರು, ತನ್ನ ನಿಲುವಿನಿಂದ ಹಿಂದಕ್ಕೆ ಸರಿಯದೇ ಇದ್ದ ಪಾಕಿಸ್ತಾನ, ಕೊನೆಗೂ 26/11 ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಸೇರಿ ಹಲವಾರು ಮುಸ್ಲಿಂ ನಾಯಕರು ಮತ್ತು ಸಂಘಟನೆಗಳನ್ನು 'ಭಯೋತ್ಪಾದಕ'ರ ಪಟ್ಟಿಗೆ ಅಧಿಕೃತವಾಗಿ ಸೇರಿಸಿದೆ. ವಿಶ್ವಸಂಸ್ಥೆಯ ಭದ್ರತಾ ಕೌನ್ಸಿಲ್ ಪಟ್ಟಿ ಮಾಡಿರುವ ಎಲ್ಲಾ ವ್ಯಕ್ತಿಗಳನ್ನು ಮತ್ತು ಸಂಘಟನೆಗಳನ್ನು, ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಕಡತಕ್ಕೆ ಪಾಕಿಸ್ತಾನದ ರಾಷ್ಟ್ರಪತಿ ಸೋಮವಾರ (ಫೆ 12) ಅಂಕಿತ ಹಾಕಿದ್ದಾರೆ.