ರಾಜಕುಮಾರ ಸಿನಿಮಾ ಭಾರತದ ಟಾಪ್ 3ನೇ ಸ್ಥಾನದಲ್ಲಿ | FIlmibeat Kannada

  • 6 years ago
Book my show release 2017 highest rated film list. Raajakumara on the Top 3 position across India in 2017 having 87% in Book My show as a Highest Grosser of Kannada

ಈ ವರ್ಷ ಬಿಡುಗಡೆಯಾದ ಸಾಕಷ್ಟು ಸಿನಿಮಾಗಳು ಪ್ರೇಕ್ಷಕರ ಮನಸ್ಸು ಗೆಲ್ಲೋದರಲ್ಲಿ ಯಶಸ್ವಿ ಆದವು. ಒಂದಷ್ಟು ಸಿನಿಮಾ ಕಲೆಕ್ಷನ್ ವಿಚಾರದಲ್ಲಿ ಸಕ್ಸಸ್ ಆಗದೇ ಇದ್ದರೂ, ಜನರಿಗೆ ಮೆಚ್ಚುಗೆ ಆಯಿತು. ಹೊಸ ಕಲಾವಿದರು ಹೊಸ ತಂತ್ರಜ್ಙರು ತಮ್ಮದೇ ಸ್ಟೈಲ್ ನಲ್ಲಿ ಸಿನಿಮಾಗಳನ್ನ ನಿರ್ದೇಶನ ಮಾಡಿ ವಿಭಿನ್ನವಾಗಿರುವ ಚಿತ್ರಗಳನ್ನ ಕನ್ನಡ ಚಿತ್ರರಂಗದಲ್ಲಿಯೂ ಮಾಡುತ್ತಾರೆ ಅನ್ನೋದನ್ನ ನಿರೂಪಿಸಿದರು. ಮತ್ತಷ್ಟು ಹೀರೋಗಳು ಸಿನಿಮಾದಲ್ಲಿ ಅಭಿನಯಿಸದೆ ಸುಮ್ಮನಾದ್ರೂ. ಪ್ರೇಕ್ಷಕರಿಗೆ ಸಿನಿಮಾಗಳ ಮೇಲೆ ಒಂದೇ ಅಭಿಪ್ರಾಯ ಇರೋದಿಲ್ಲ. ಕೆಲವರಿಗೆ ಆಕ್ಷನ್ ಚಿತ್ರಗಳು ಇಷ್ಟವಾದರೆ, ಮತ್ತಷ್ಟು ಜನರಿಗೆ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾಗಳು ಮೆಚ್ಚುಗೆ ಆಗುತ್ತೆ. ಮತ್ತಷ್ಟು ಜನರಿಗೆ ನಾರ್ಮಲ್ ಚಿತ್ರಗಳಿಗಿಂತಲೂ ಏನಾದರೂ ವಿಭಿನ್ನ ಪ್ರಯತ್ನ ಮಾಡಿದ್ದರೆ ಚೆನ್ನ ಅನ್ನೋ ಅಭಿಪ್ರಾಯಗಳು ಇರುತ್ತವೆ.ಸ್ಯಾಂಡಲ್ ವುಡ್ ನಲ್ಲಿ ಬಿಡುಗಡೆಯಾದ ಒಂದು ಚಿತ್ರ ಮಾತ್ರ ಇಡೀ ಕನ್ನಡ ಸಿನಿಮಾ ಪ್ರೇಕ್ಷಕರ ಸಮೂಹದ ಮೆಚ್ಚುಗೆ ಗಳಿಸಿತು.