• 8 years ago
Bigg Boss Kannada 5: Week 11: Elimination process commenced at 3 AM at Bigg Boss house, in which Sameeracharya got evicted. After elimination, Sameer Acharya has been sent directly to secret room. Sameer Acharya was surprised to see Jayasreenivasan who was already there in the Secret Room.

ಮಧ್ಯರಾತ್ರಿ ಮೂರು ಗಂಟೆ ಸಮಯದಲ್ಲಿ ಸ್ಪರ್ಧಿಗಳೆಲ್ಲ ಗಾಢ ನಿದ್ದೆ ಮಾಡುತ್ತಿರುವಾಗ, ದಿಢೀರ್ ಅಂತ 'ಎಲಿಮಿನೇಷನ್' ಪ್ರಕ್ರಿಯೆಗೆ 'ಬಿಗ್ ಬಾಸ್' ಚಾಲನೆ ನೀಡಿದರು.ಬೆಡ್ ರೂಮ್ ಹಾಗೂ ಲಿವಿಂಗ್ ಏರಿಯಾದಲ್ಲಿ ಒಬ್ಬೊಬ್ಬರನ್ನೇ ಸೇಫ್ ಮಾಡುತ್ತಾ ಬಂದ 'ಬಿಗ್ ಬಾಸ್', ಡೇಂಜರ್ ಝೋನ್ ಗೆ ಮೂವರು ಸ್ಪರ್ಧಿಗಳನ್ನ (ಸಮೀರಾಚಾರ್ಯ, ದಿವಾಕರ್ ಹಾಗೂ ಶ್ರುತಿ ಪ್ರಕಾಶ್) ತಳ್ಳಿದರು.ಡೇಂಜರ್ ಝೋನ್ ನಲ್ಲಿ ಇದ್ದ ದಿವಾಕರ್ ಹಾಗೂ ಶ್ರುತಿ ಪ್ರಕಾಶ್ ರವರನ್ನ ಸೇಫ್ ಮಾಡಿ ಸಮೀರಾಚಾರ್ಯ ರವರನ್ನ 'ಬಿಗ್ ಬಾಸ್' ಹೊರಗೆ ಕರೆದರು. ಹಿಂದು ಮುಂದು ಯೋಚನೆ ಮಾಡದ ಸಮೀರಾಚಾರ್ಯ ಸೀದಾ ಆಚೆ ಹೊರಟರು.'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಿಂದ ಹನ್ನೊಂದನೇ ವಾರ ಸಮೀರಾಚಾರ್ಯ ಔಟ್ ಆಗಿದ್ದಾರೆ ಎಂದು 'ಬಿಗ್ ಬಾಸ್' ಘೋಷಿಸಿದರು. ಆದ್ರೆ, ವಾಸ್ತವ ಅದಲ್ಲ. 'ಬಿಗ್ ಬಾಸ್' ಮನೆಯೊಳಗೆ ಇರುವ ಸ್ಪರ್ಧಿಗಳ ಪಾಲಿಗೆ ಮಾತ್ರ ಸಮೀರಾಚಾರ್ಯ ಔಟ್ ಆಗಿದ್ದಾರೆ.

Recommended