ಮುಂಬೈನಲ್ಲಿ ನಡೆದ ವಿರುಷ್ಕಾ ಜೋಡಿಯ ಆರತಕ್ಷತೆಯಲ್ಲಿ ಮೋಜು ಮಾಡಿದ ಸೆಲೆಬ್ರಿಟಿಗಳು | Oneindia Kannada

  • 7 years ago
ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮ ಜೋಡಿ ಯೂರೋಪ್ ನಲ್ಲಿ ಹನಿಮೂನ್ ಮುಗಿಸಿಕೊಂಡು ಗುರುವಾರ (ಡಿಸೆಂಬರ್ 21) ನವದೆಹಲಿ ಗ್ರ್ಯಾಂಡ್ ರಿಸೆಪ್ಷನ್ ನಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದರು. ದೆಹಲಿಯ ತಾಜ್ ಡಿಪ್ಲೊಮೆಟಿಕ್ ಎನ್ ಕ್ಲೇವ್ ನ ದರ್ಬಾರ್ ಹಾಲ್ ನಲ್ಲಿ ಕೆಂಪು ಬಣ್ಣದ ಬನಾರಸ್ ಸೀರೆಯಲ್ಲಿ ಅನುಷ್ಕಾ ಮಿಂಚಿದ್ರೆ, ಕೊಹ್ಲಿ ಶೇರ್ವಾನಿಯಲ್ಲಿ ನೋಡುಗರ ಕಣ್ಮನ ಸೆಳೆದರು. ಪ್ರಧಾನಿ ನರೇಂದ್ರ ಮೋದಿ, ಸುರೇಶ್ ರೈನಾ, ಶಿಖರ್ ಧವನ್ ಸೇರಿದಂತೆ ಬಾಲಿವುಡ್‌ ನಟರು, ಕ್ರಿಕೆಟರ್ಸ್ ಸೇರಿದಂತೆ ಅನೇಕ ಗಣ್ಯಾತಿಗಣ್ಯರು ವಿರುಷ್ಕಾ ಮದುವೆ ಆರತಕ್ಷತೆಗೆ ಸಾಕ್ಷಿಯಾದರು.ಯತ್ನಿಕ್ ಡ್ರೆಸ್ ನಲ್ಲಿ ಮಿಂಚಿದ ವಿರುಷ್ಕಾ ರಿಸೆಪ್ಷನ್ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇನ್ನು ಮುಂಬೈನಲ್ಲಿ ಇದೇ ಡಿಸೆಂಬರ್ 26ರಂದು ಮುಂಬೈನಲ್ಲಿ ವಿರಾಟ್ ಹಾಗೂ ಅನುಷ್ಕಾ ಆರತಕ್ಷತೆ ನಡೆಯಿತು.


Virat and Anushka throw a major reception party at Mumbai . Celebrities from both cricket and bollywood had come to the party and had lots of fun

Recommended