2ಜಿ ಸ್ಪೆಕ್ಟ್ರಮ್ ಹಗರಣದ ತೀರ್ಪು : ಟ್ವಿಟ್ಟಿಗರು ಫುಲ್ ಗರಂ | Oneindia Kannada

  • 7 years ago
All accused in the 2G spectrum allocation scam cases - including former telecom minister A Raja and DMK MP Kanimozhi - have been acquitted by a Special court in Delhi. Here are few tweets on 2G scam verdict, in which people show their anger against Indian Judiciary.


ಭಾರತ ಸರ್ಕಾರದ ಬೊಕ್ಕಸಕ್ಕೆ ಬಹುಕೋಟಿ ನಷ್ಟವನ್ನುಂಟು ಮಾಡಿದ 2 ಜಿ ಹಗರಣದ ತೀರ್ಪು ಇಂದು ಹೊರಬಿದ್ದಿದ್ದು, ಅಂದುಕೊಂಡಿದ್ದೇ ಒಂದು, ಆದದ್ದೇ ಒಂದು ಎಂಬಂತಾಗಿದೆ! ಸೂಕ್ತ ಸಾಕ್ಷ್ಯಾಧಾರವಿಲ್ಲ ಎಂಬ ಕಾರಣಕ್ಕೆ ಪ್ರಮುಖ ಆರೋಪಿಗಳಾಗಿದ್ದ ಎ.ರಾಜಾ ಮತ್ತು ಕನ್ನಿಮೋಳಿ ಸೇರಿದಂತೆ 17 ಆರೋಪಿಗಳನ್ನು ದೆಹಲಿಯ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ.ಕೋರ್ಟು ಈ ರೀತಿ ತೀರ್ಪು ನೀಡುತ್ತಿದ್ದಂತೆಯೇ ಎ.ರಾಜಾ, ಕನ್ನಿಮೋಳಿ ಅಭಿಮಾನಿಗಳು ಹರ್ಷಾಚರಣೆಯಲ್ಲಿ ತೊಡಗಿದ್ದಾರೆ. ಆದರೆ ಟ್ವಿಟ್ಟರ್ ನಲ್ಲಿ ಈ ತೀರ್ಪಿನ ಕುರಿತು ಆಕ್ರೋಶ ವ್ಯಕ್ತವಾಗಿದೆ. 1.76 ಲಕ್ಷ ಕೋಟಿ ರೂ. ನಷ್ಟಕ್ಕೆ ಹೊಣೆಯಾರು ಎಂಬ ಪ್ರಶ್ನೆ ಎದ್ದಿದೆ.ಮತ್ತೂ ಕೆಲವರು ಮೋದಿ ಸರ್ಕಾರವನ್ನು ಕಾಲೆಳೆಯುವಲ್ಲಿಯೂ ಹಿಂದೆಬಿದ್ದಿಲ್ಲ! ಯುಪಿಎ ಸರ್ಕಾರದ ಆಡಳಿತಾವಧಿಯಲ್ಲಿ ನಡೆದ ಹಗರಣಗಳಲ್ಲಿ ಪ್ರಮುಖವಾದ 2 ಜಿ ಹಗರಣವನ್ನೇ ಮುಂದಿಟ್ಟುಕೊಂಡು ಅಧಿಕಾರ ಪಡೆದಿದ್ದ ಬಿಜೆಪಿಗೆ ಈ ತೀರ್ಪು ಮುಖಭಂಗವನ್ನುಂಟು ಮಾಡಿದೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.