ವಯಸ್ಸಾಗಿರೋ ಅಂಬಿ ಪ್ರೇಕ್ಷಕರಿಗೆ ಬರೆದ ಪತ್ರದಲ್ಲೇನಿದೆ ? | Filmibeat Kannada

  • 7 years ago
ಅಂಬಿಗೆ ವಯಸ್ಸಾಗಿದೆ. ಈ ಮಾತನ್ನ ನಾವು ಹೇಳ್ತಿಲ್ಲ, ಖುದ್ದು ಕಿಚ್ಚ ಸುದೀಪ್ ಅವರೇ ಹೇಳಿದ್ದಾರೆ. ಹೌದು ಕಿಚ್ಚ ಸುದೀಪ್ ಹಾಗೂ ರೆಬಲ್ ಸ್ಟಾರ್ ಅಂಬರೀಶ್ ಅಭಿನಯದ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದ ಮೊದಲ ಟೀಸರ್ ರಿಲೀಸ್ ಆಗಿದೆ. ಟೈಟಲ್ ನಿಂದಲೇ ಬಾರಿ ಕುತೂಹಲ ಮೂಡಿಸಿದ್ದ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ಹಲವಾರು ವಿಶೇಷತೆಗಳಿಂದ ಕೂಡಿದೆ. ಇಷ್ಟು ದಿನಗಳ ಕಾಲ ಅಂಬಿಯನ್ನ ತೆರೆ ಮೇಲೆ ನೋಡಿರುವುದಕಿಂತ ಭಿನ್ನವಾಗಿ ಈ ಚಿತ್ರದಲ್ಲಿ ತೋರಿಸಲಾಗುತ್ತಿದೆ. ಈ ಸುದ್ದಿಯನ್ನ ಅಂಬಿಯವರೇ ಅಭಿಮಾನಿಗಳಿಗೆ ಪತ್ರ ಬರೆಯುವ ಮೂಲಕ ತಿಳಿಸಿದ್ದಾರೆ.ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾತಂಡ ಚಿತ್ರದ ಟೀಸರ್ ರಿಲೀಸ್ ಮಾಡಿದೆ. ವಿಭಿನ್ನವಾಗಿರೋ ಪ್ರಯತ್ನ ಮಾಡಬೇಕು ಅನ್ನೋ ನಿಟ್ಟಿನಲ್ಲಿ ಅಂಬಿ ಅವರಿಂದ ಅಭಿಮಾನಿಗಳಿಗಾಗಿ ಪತ್ರ ಬರೆಸಿದ್ದಾರೆ. ತಮ್ಮ ಜೀವನದ ಸಣ್ಣ ಜರ್ನಿಯನ್ನ ಈ ಮೂಲಕ ತಿಳಿಸಿದ್ದಾರೆ ಅಂಬಿ.

Ambi written a letter to his fans through the film 'Ambi ning vysaitho'team and also In the letter, ambhi discusses interesting fact about Sudeep