ಬಿಎಂಟಿಸಿಯಲ್ಲಿ 2225 ವಿವಿಧ ಹುದ್ದೆಗಳಿಗೆ ನೇಮಕಾತಿ, ಅರ್ಜಿ ಸಲ್ಲಿಸಿ | Oneindia Kannada

  • 7 years ago
ಬೆಂಗಳೂರು, ಡಿಸೆಂಬರ್ 7: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯಲ್ಲಿ ಖಾಲಿ ಇರುವ ಒಟ್ಟು 2225 ವಿವಿಧ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.500 ಚಾಲಕ, 534 ನಿರ್ವಾಹಕ, 39 ಸಹಾಯಕ ಸಂಚಾರ ನಿರೀಕ್ಷಕ, 172 ಭದ್ರತಾ ರಕ್ಷಕ, 82 ಕುಶಲಕರ್ಮಿ ಹಾಗೂ 898 ತಾಂತ್ರಿಕ ಸಹಾಯಕ ಒಟ್ಟು 2225 ಹುದ್ದೆಗಳಿಗೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.25 ಹುದ್ದೆಗಳ ಈ ಪೈಕಿ 405 ಹೈದ್ರಾಬಾದ್ ಕರ್ನಾಟಕ (371) ಅಭ್ಯರ್ಥಿಗಳಿಗೆ ಮೀಸಲಿವೆ. ಇನ್ನುಳಿದ 1820 ಹುದ್ದೆಗಳು ಇತರೆ ಅಭ್ಯರ್ಥಿಗಳಿಗೆ ಮೀಸಲಿದ್ದು, ದಿನಾಂಕ 26/12/2017ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.ಸಧ್ಯ ಇಷ್ಟು ಮಾತ್ರ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ವಿದ್ಯಾರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ ಸೇರಿದಂತೆ ಇನ್ನಿತರ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ. ಈ ಬಗ್ಗೆ ಮಾಹಿತಿಯನ್ನು ಬಿಎಂಟಿಸಿಯ ವೆಬ್ ಸೈಟ್ ನಲ್ಲಿ ತಿಳಿಯಿರಿ .


Bengaluru Metropolitan Transport Corporation has been released on official website for the recruitment of total 2225, jobs out of which 500 vacancies for driver, 534 for conductor, 898 for Technical Assistant. 39 Assistant traffic inspector and others total 2225. Job seekers should apply before the 26 December 2017 by online.