ಚೆನ್ನೈನಲ್ಲಿ ಹಿಂಸಾಚಾರಕ್ಕೆ ತಿರುಗಿದ ವಿದ್ಯಾರ್ಥಿಗಳ ಪ್ರತಿಭಟನೆ | Oneindia Kannada

  • 7 years ago
ಚೆನ್ನೈನ ಸತ್ಯಭಾಮಾ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿನಿ ರಾಗಮೌಲಿಕಾ ಎಂಬಾಕೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇದೀಗ ವಿಶ್ವವಿದ್ಯಾಲಯವನ್ನು ರಣಾರಂಗಣವಾಗಿಸಿದೆ. ವಿಶ್ವವಿದ್ಯಾಲಯ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ವಿದ್ಯಾರ್ಥಿನಿ ಕೆಲ ದಿನಗಳ ಹಿಂದಷ್ಟೇ ಆತ್ಮಹತ್ಯೆ ಮಾಡಿಕೊಂಡಿದ್ದಳು. ವಿದ್ಯಾರ್ಥಿನಿಯ ಆತ್ಮಹತ್ಯೆಯಿಂದ ಕ್ಷುದ್ಧಗೊಂಡಿರುವ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಕಟ್ಟಡಗಳಿಗೆ ಕಳೆದ ರಾತ್ರಿ ಬೆಂಕಿ ಹಚ್ಚಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ರಾಗಮೋನಿಕಾ ಹೈದರಾಬಾದ್ ಮೂಲದವಳಾಗಿದ್ದು, ಎಂಜಿನಿಯರಿಂಗ್ ನ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದಳು. ನಿನ್ನೆ ಬೆಳಿಗ್ಗೆ 2ನೇ ಸೆಮಿಸ್ಟರ್ ನ ಪರೀಕ್ಷೆ ಬರೆಯುತ್ತಿದ್ದ ವೇಳೆ ನಕಲು ಮಾಡುವಾಗ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಳು. ಆ ನಂತರ ಪರೀಕ್ಷಾ ಕೊಠಡಿಯಿಂದ ರಾಧಾಳನ್ನು ಹೊರಗೆ ಕಳುಹಿಸಿದ್ದರು.

The Sathyabama University campus in Chennai tonight saw violence and arson after students, angry over the suicide of a batch mate, went on rampage and set fire to university property.