ಬಿಜೆಪಿಯ ನವ ಕರ್ನಾಟಕ ಪರಿವರ್ತನಾ ಯಾತ್ರೆಯ ವಿರುದ್ಧ ಕಾರ್ಯಕರ್ತರು ಗರಂ | Oneindia Kannada

  • 7 years ago
BJP National president Amit Shah launched party's election campaign for 2018 assembly elections in Karnataka. But Karnataka BJP facing internal conflict.


ಬಿಜೆಪಿ ಕಾರ್ಯಕರ್ತರು ತಿರುಗಿ ಬೀಳುವುದಕ್ಕೆ ಕಾರಣಗಳೇನು? 150 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಗುರಿಯೊಂದಿಗೆ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ ಆರಂಭಸಿರುವ ಕರ್ನಾಟಕ ಬಿಜೆಪಿಗೆ ಅಸಮಾಧಾನದ ಬಿಸಿ ತಟ್ಟಿದೆ. ಪಕ್ಷದೊಳಗೆ ಭಿನ್ನಮತದ ಚಟುವಟಿಕೆಗಳಿಗೆ ಮತ್ತೆ ಜೀವ ಬಂದಿದೆ. ಯಾತ್ರೆ ಆರಂಭಗೊಂಡ ಮೂರು ದಿನದಲ್ಲಿಯೇ ಬಣ ರಾಜಕೀಯ, ಒಳಜಗಳ ಬಹಿರಂಗವಾಗಿದೆ.ಯಡಿಯೂರಪ್ಪ ಅವರು ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಳಿಕ ಪಕ್ಷದಲ್ಲಿ ಭಿನ್ನಮತೀಯ ಚಟುವಟಿಕೆಗಳು ಆರಂಭವಾಗಿತ್ತು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಆರ್‌ಎಸ್ಎಸ್ ನಾಯಕರ ಮಧ್ಯಸ್ಥಿಕೆಯಿಂದ ಎಲ್ಲವೂ ತೆರೆಮರೆಗೆ ಸರಿದಿದ್ದವು. ಎಲ್ಲಾ ನಾಯಕರು ಒಟ್ಟಾಗಿ ನಾವೆಲ್ಲ ಒಂದೇ ಎಂದು ಸಮಾವೇಶಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ.ನವ ಕರ್ನಾಟಕ ನಿರ್ಮಾಣ ಪರಿವವರ್ತನಾ ಯಾತ್ರೆ ಉದ್ಘಾಟನಾ ಸಮಾವೇಶ ಆಯೋಜನೆ ವಿಚಾರದಲ್ಲಿ ಉಂಟಾದ ಗೊಂದಲ ಮುಂದುವರೆದಿದೆ. ಯಾತ್ರೆ ಬೆಂಗಳೂರು ಬಿಟ್ಟು ತುಮಕೂರು ತಲುಪುತ್ತಿದ್ದಂತೆ ಅಸಮಾಧಾನ ಬಹಿರಂಗವಾಗಿದೆ. ಪಕ್ಷದ ನಾಯಕರ ವಿರುದ್ಧವೇ ಮಾಜಿ ಸಚಿವ ಸೊಗಡು ಶಿವಣ್ಣ ಆರೋಪ ಮಾಡಿದ್ದು, 'ಇದು ಬಿಜೆಪಿ ಯಾತ್ರೆಯಲ್ಲ, ಕೆಜೆಪಿ ಯಾತ್ರೆ' ಎಂದು ಅಸಮಾಧಾನ ಹೊರಹಾಕಿದ್ದಾರೆ.

Recommended