• 7 years ago
ಅನುಪಮಾ ಶೆಣೈ ಡಿವೈಎಸ್ಪಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಅವರು ಬಿಜೆಪಿ ಸೇರುತ್ತಾರೆ ಎಂಬ ವದಂತಿ ಹಬ್ಬಿತ್ತು..ಆರ್ ಎಸ್ ಎಸ್ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ , ಶ್ರೀನಿವಾಸ್ ಪ್ರಸಾದ್ ಹಾಗೂ ಹಿರಿಯ ಬಿಜೆಪಿ ಮುಖಂಡ ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ್ ಸೇಡಂರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು..ಹೀಗಾಗಿ ಅನುಪಮಾ ಶೆಣೈ ಬಿಜೆಪಿ ಸೇರುತ್ತಾರೆ ಅಂತ ಹೇಳಾಗಿತ್ತು..ಆದ್ರೆ ಇದೀಗ ಆ ಊಹಾಪೋಹಗಳಿಗೆ ತೆರೆ ಏಳೆದಿದ್ದಾರೆ..ಇದೀಗ ತಮ್ಮದೇ ಸ್ವಂತ ಪಕ್ಷವನ್ನ ಸ್ಥಾಪನೆ ಮಾಡುತ್ತಿದ್ದಾರೆ..ನ.1 ರಂದು ಹೊಸ ರಾಜಕೀಯ ಪಕ್ಷದ ಘೋಷಣೆ ಮಾಡಲಿದ್ದಾರೆ..ಇದ್ರ ಬಗ್ಗೆ ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅನುಪಮ ಶಣೈ ನಾನು ಚುನಾವಣೆಗೆ ಸ್ಪರ್ಧಿಸುವ ಆಸೆ ಹೊಂದಿದ್ದೇನೆ ಆದ್ರೆ ಕ್ಷೇತ್ರ ಯಾವುದು ಅಂತಾ ಅಂತಿಮವಾಗಿಲ್ಲ..ರಾಜಕೀಯ ಸೇರುವ ಉದ್ದೇಶದಿಂದ ರಾಜಕೀಯ ತಿಳಿದುಕೊಳ್ಳಲು ರಾಜಕಾರಣಿಗಳನ್ನು ಭೇಟಿಯಾಗಿದ್ದೇ ಅಂದ್ರು ಅಲ್ದೇ ರಾಜ್ಯದಲ್ಲಿ ಭ್ರಷ್ಟಾಚಾರದ ಜೊತೆ ದುಷ್ಟಾಚಾರ ಕೂಡಾ ವ್ಯಾಪಕವಾಗಿದೆ ಅಂದ್ರು..ನ.1 ರಂದು ಕೂಡ್ಲಿಗಿಯಲ್ಲಿರುವ ಗಾಂಧೀಜಿ ಚಿತಾಭಸ್ಮಕ್ಕೆ ಪುಷ್ಪನಮನ ಸಲ್ಲಿಸಿ ಪಂಚಾಚಾರ್ಯ ಕಲ್ಯಾಣ ಮಂಟಪದವರೆಗೆ ಪಾದಯತ್ರೆ ನಡೆಸಲಿದ್ದಾರೆ..

Former DYSP Anupama Shenoy launch new political party on november 1

Category

🗞
News

Recommended