ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರವಿವಾರ ಬೆಳಗ್ಗೆಯಿಂದ ಸಂಜೆಯವರೆಗೆ ಭಾರೀ ಮಳೆ ಸುರಿಯಿತು. ಹೀಗಾಗಿ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವಂತಹ ಕಲ್ಲಡ್ಕದಲ್ಲಿ ರಸ್ತೆಯೇ ಮಾಯವಾದ ದೃಶ್ಯ ಕಂಡು ಬಂತು. ಯಾಕಂದ್ರೆ ಸತತ ಮಳೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೀತಾ ಇರುವ ರಸ್ತೆಯಲ್ಲಿ ಕೆಸರು ತುಂಬಿದ ನೀರು ಹರಿದ ಪರಿಣಾಮ ರಸ್ತೆಯೇ ಮಾಯವಾದ ದೃಶ್ಯ ಕಂಡುಬಂತು. ಹೀಗಾಗಿ ವಾಹನ ಸವಾರು ಕೆಸರು ನೀರು ತುಂಬಿದ ರಸ್ತೆಯಲ್ಲಿ ಹೋಗೋಕೆ ಪರದಾಡಿದ ದೃಶ್ಯ ಕಂಡು ಬಂತು. ಕಲ್ಲಡ್ಕದಲ್ಲಿ ಸದ್ಯ ಅಡ್ಡ ಹೊಳೆ - ಬಿಸಿ ರೋಡು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡಿತಾ ಇದೆ. ಇದೀಗ ಸತತ ಮಳೆಯಿಂದ ಕಲ್ಲಡ್ಕದಲ್ಲಿ ರಸ್ತೆಯ ಅವ್ಯವಸ್ಥೆ ಮತ್ತಷ್ಟು ಹೆಚ್ಚಾಗಿದೆ. ಕೆಸರು ನೀರು ತುಂಬಿದ ರಸ್ತೆಯಲ್ಲಿ ಸಂಚಾರ ಮಾಡೋಕೆ ಪರದಾಡಿದ ವಾಹನ ಸವಾರರು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಹಾಗೂ ಕಾಮಗಾರಿ ನಡೆಸುತ್ತಿರುವ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಕೂಡ ನಡೆಯಿತು.
Category
🏖
Travel