ಡಾರ್ಲಿಂಗ್ ಕೃಷ್ಣ ಸಿನಿಮಾ ರಿಲೀಸ್‌ಗೂ ಮುನ್ನ ಲಾಭ ಮಾಡಿದೆ (ಸಂದೇಶ್ ನಾಗರಾಜ್, ನಿರ್ಮಾಪಕ)

  • 3 years ago
"ವಿಜಯದಶಮಿ ದಿನ shreekrishna@gmail.com ಸಿನಿಮಾ ರಿಲೀಸ್ ಆಗುತ್ತಿದೆ. ನಾನು ಮಾಡಿರೋದು ನನಗೆ ದೊಡ್ಡ ಸಿನಿಮಾ. ನನ್ನ ಸಿನಿಮಾವನ್ನು ರಿಲೀಸ್ ಮಾಡಲು ಥಿಯೇಟರ್ ಸಮಸ್ಯೆ ಆಗಲಿಲ್ಲ. ಈ ಹಿಂದೆಯೇ ನಾನು ಥಿಯೇಟರ್ ರಿಲೀಸ್ ಮಾಡುವ ಬಗ್ಗೆ ಜಯಣ್ಣ ಅವರ ಜೊತೆ ಮಾತನಾಡಿದ್ದೆ. ಸಿನಿಮಾ ಚೆನ್ನಾಗಿದೆ, ಕನ್ನಡಿಗರು ನಮ್ಮ ಸಿನಿಮಾವನ್ನು ನೋಡಿ ಇಷ್ಟಪಡ್ತಾರೆ ಎಂಬ ನಂಬಿಕೆಯಿದೆ. ಸಂದೇಶ್ ಪ್ರಿನ್ಸ್ ಹೋಟೆಲ್ ಕುರಿತಂತೆ ಪ್ರಕರಣ ಎಲ್ಲವೂ ಮುಕ್ತಾಯವಾಗಿದೆ. ಡಾರ್ಲಿಂಗ್ ಕೃಷ್ಣ ಮೈಸೂರಿನ ಹುಡುಗ, ಯಾವುದೇ ಕಿರಿಕಿರಿ ಮಾಡದೆ ಸಿನಿಮಾದಲ್ಲಿ ನಟಿಸಿದ್ದಾರೆ. ಹೀಗಾಗಿ ಅವರ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸುವೆ. ಸಿನಿಮಾ ರಿಲೀಸ್‌ಗೂ ಮುನ್ನವೇ ನನಗೆ ಬರಬೇಕಾಗಿದ್ದು ಬಂದಿದೆ. ಇದು ಅತಿಶಯೋಕ್ತಿ ಎನಿಸಬಹುದು. ನಾಗಶೇಖರ್, ಭಾವನಾ ಮೆನನ್, ಸಾಧುಕೋಕಿಲ ಮುಂತಾದವರು ಒಳ್ಳೆಯ ನಟನೆ ಮಾಡಿದ್ದಾರೆ" ಎಂದು ನಿರ್ದೇಶಕ ಸಂದೇಶ್ ನಾಗರಾಜ್ ಹೇಳಿದ್ದಾರೆ.