ಬಹುನಿರೀಕ್ಷಿತ ಟ್ರೈಡೆಂಟ್ 660 ಬೈಕ್ ಬಿಡುಗಡೆಗೊಳಿಸಿದ ಟ್ರಯಂಫ್ ಮೋಟಾರ್‌ಸೈಕಲ್ಸ್ ಇಂಡಿಯಾ

  • 3 years ago
ಟ್ರಯಂಫ್ ಮೋಟಾರ್‌ಸೈಕಲ್ಸ್ ಇಂಡಿಯಾ ಕಂಪನಿಯು ತನ್ನ ಬಹುನಿರೀಕ್ಷಿತ ಟ್ರೈಡೆಂಟ್ 660 ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಟ್ರೈಡೆಂಟ್ 660 ಸ್ಟ್ರೀಟ್ ನೇಕೆಡ್ ಬೈಕಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.6.95 ಲಕ್ಷಗಳಾಗಿದೆ.

ಕಂಪನಿಯು ಈ ಬೈಕ್ ಖರೀದಿಸಲು ರೂ.9,999ಗಳ ಇಎಂಐ ಯೋಜನೆಯನ್ನು ಪ್ರಕಟಿಸಿದೆ. ರೂ.50,000 ಪಾವತಿಸಿ ಈ ಬೈಕ್ ಅನ್ನು ಬುಕ್ಕಿಂಗ್ ಮಾಡಬಹುದು. ಕಂಪನಿಯು ಈ ಬೈಕಿಗಾಗಿ ಇದುವರೆಗೂ 125ಕ್ಕೂ ಹೆಚ್ಚು ಬುಕ್ಕಿಂಗ್'ಗಳನ್ನು ಸ್ವೀಕರಿಸಿದೆ. ಈ ಬೈಕಿನ ವಿತರಣೆಯನ್ನು ಈ ತಿಂಗಳ ಕೊನೆಗೆ ಆರಂಭಿಸಲಾಗುತ್ತದೆ.

ಸ್ಟ್ರೀಟ್ ನೇಕೆಡ್ ಬೈಕ್ ಅನ್ನು ಕ್ರಿಸ್ಟಲ್ ವೈಟ್, ಸಫೈರ್ ಬ್ಲಾಕ್, ಮ್ಯಾಟ್ ಜೆಟ್ ಬ್ಲಾಕ್ ಮತ್ತು ಸಿಲ್ವರ್ ಐಸ್, ಸಿಲ್ವರ್ ಐಸ್ ಮತ್ತು ಡಯಾಬ್ಲೊ ರೆಡ್ ಎಂಬ ನಾಲ್ಕು ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಟ್ರಯಂಫ್ ಟ್ರೈಡೆಂಟ್ 660 ಬೈಕ್ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.