• 5 years ago
ವೋಲ್ವೋ ಇಂಡಿಯಾ ಕಂಪನಿಯು 2019ರ ಡಿಸೆಂಬರ್‌ನಲ್ಲಿ ಹೊಸ ಎಕ್ಸ್‌ಸಿ 40 ಟಿ 4 ಆರ್-ಡಿಸೈನ್ ಪೆಟ್ರೋಲ್ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಬಿಡುಗಡೆಯಾದಾಗ ಈ ಎಸ್‌ಯುವಿಯ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.39.90 ಲಕ್ಷಗಳಾಗಿತ್ತು.

ಈಗ ಕಂಪನಿಯು ಎಕ್ಸ್‌ಸಿ 40 ಎಸ್‌ಯುವಿಯ ಬೆಲೆಯನ್ನು ಮೂರು ಲಕ್ಷ ರೂಪಾಯಿಗಳಷ್ಟು ಕಡಿತಗೊಳಿಸಿದೆ. ಎಸ್‌ಯುವಿ ಮಾರಾಟವನ್ನು ಹೆಚ್ಚಿಸುವ ಉದ್ದೇಶದಿಂದ ಕಂಪನಿಯು ಈ ಎಸ್‌ಯುವಿಯ ಬೆಲೆಯನ್ನು ಕಡಿಮೆ ಮಾಡಿದೆ.

ಹೊಸ ಎಕ್ಸ್‌ಸಿ 40 ಎಂಟ್ರಿ-ಲೆವೆಲ್ ಸೆಗ್ ಮೆಂಟಿನಲ್ಲಿ ಪೆಟ್ರೋಲ್ ಎಂಜಿನ್ ಹೊಂದಿರುವ ವೋಲ್ವೋ ಕಂಪನಿಯ ಚಿಕ್ಕ ಎಸ್‌ಯುವಿಯಾಗಿದೆ. ಮೂರು ಲಕ್ಷ ರೂಪಾಯಿಗಳ ಕಡಿತದ ಹೊರತಾಗಿ ಕಂಪನಿಯು ಈ ಎಸ್‌ಯುವಿ ಖರೀದಿಯೊಂದಿಗೆ ಒಂದು ಲಕ್ಷ ರೂಪಾಯಿ ಬೆಲೆ ಬಾಳುವ ಆಕ್ಸೆಸರೀಸ್ ಗಳನ್ನು ಸಹ ನೀಡುತ್ತಿದೆ.

Category

🚗
Motor

Recommended