• 4 years ago
ಎಂಜಿ ಮೋಟರ್ ಇಂಡಿಯಾ, ದೇಶಿಯ ಮಾರುಕಟ್ಟೆಯಲ್ಲಿ ಹೆಕ್ಟರ್ ಪ್ಲಸ್ ಎಸ್‌ಯುವಿಗಾಗಿ ಅಧಿಕೃತ ಬುಕ್ಕಿಂಗ್ ಗಳನ್ನು ಆರಂಭಿಸಿದೆ. ಹೊಸ ಎಂಜಿ ಹೆಕ್ಟರ್ ಪ್ಲಸ್ ಅನ್ನು
ಆನ್‌ಲೈನ್ ಮೂಲಕ ಅಥವಾ ಭಾರತದಲ್ಲಿರುವ ಯಾವುದೇ ಡೀಲರ್ ಬಳಿ ರೂ.50,000 ಪಾವತಿಸುವ ಮೂಲಕ ಬುಕ್ಕಿಂಗ್ ಮಾಡಬಹುದು.

ಗುಜರಾತ್‌ನ ಹಾಲೊಲ್‌ನಲ್ಲಿರುವ ಕಂಪನಿಯ ಉತ್ಪಾದನಾ ಘಟಕದಲ್ಲಿ ಹೆಕ್ಟರ್ ಪ್ಲಸ್ ಉತ್ಪಾದನೆಯನ್ನು ಆರಂಭಿಸಲಾಗಿದೆ. ಆರು ಸೀಟುಗಳ ಈ ಎಸ್‌ಯುವಿಯನ್ನು ಈಗಾಗಲೇ ಡೀಲರ್ ಗಳಿಗೆ ತಲುಪಿಸಲಾಗಿದೆ. ಮುಂಬರುವ ವಾರಗಳಲ್ಲಿ ಎಂಜಿ ಹೆಕ್ಟರ್ ಪ್ಲಸ್ ಅನ್ನು ಭಾರತದಲ್ಲಿ ಮಾರಾಟ ಮಾಡುವ ನಿರೀಕ್ಷೆಗಳಿವೆ. ಈ ಎಸ್‌ಯುವಿಯನ್ನು ಬಿಡುಗಡೆಯಾದ ತಕ್ಷಣವೇ ವಿತರಿಸಲಾಗುವುದು.

Category

🗞
News

Recommended