• 5 years ago
ಹೋಂಡಾ ಕಾರ್ಸ್ ಇಂಡಿಯಾ ತನ್ನ ಗ್ರಾಹಕರಿಗಾಗಿ ದೀರ್ಘಾವಧಿ ಹಣಕಾಸು ಸೌಲಭ್ಯಗಳನ್ನು ಘೋಷಿಸಿದೆ. ಕಾರು ಖರೀದಿಯನ್ನು ಸುಲಭಗೊಳಿಸುವ ಸಲುವಾಗಿ
ಕಂಪನಿಯು ಆಕ್ಸಿಸ್ ಬ್ಯಾಂಕ್‌ನೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಂಡಿದೆ.

ಕಂಪನಿಯು ಗ್ರಾಹಕರಿಗೆ ಅವರ ಅರ್ಹತೆಯ ಆಧಾರದ ಮೇಲೆ ಕಸ್ಟಮೈಸ್ ಮಾಡಿದ ಹಣಕಾಸು ಸೌಲಬ್ಯವನ್ನು ನೀಡುತ್ತಿದೆ. ಈ ಸೌಲಭ್ಯವು ಆಯ್ದ ಮಾದರಿಗಳಿಗೆ ಮಾತ್ರ ಅನ್ವಯಿಸಲಿದೆ. ದೀರ್ಘಾವಧಿಯ ಹಣಕಾಸ ಯೋಜನೆಯಲ್ಲಿ ಗರಿಷ್ಠ ಎಂಟು ವರ್ಷಗಳವರೆಗೆ ಸಾಲ ನೀಡಲಾಗುವುದು.

ಇಎಂಐಗಳಿಗೆ ಸರಿಹೊಂದುವ ರೀತಿಯಲ್ಲಿ ಪಾವತಿ ಮಾಡುವ ಆಯ್ಕೆಯನ್ನು ಗ್ರಾಹಕರಿಗೆ ನೀಡಲಾಗುತ್ತದೆ. ಇದರಿಂದಾಗಿ ಗ್ರಾಹಕರು ತಮ್ಮ ಮಾಸಿಕ ಅಗತ್ಯಗಳಿಗೆ ತಕ್ಕಂತೆ ಹಣಕಾಸನ್ನು ಹೊಂದಿಸಿ ಕೊಳ್ಳಬಹುದು. ಈ ಹೊಸ ಹಣಕಾಸು ಸೌಲಭ್ಯವನ್ನು ಸದ್ಯಕ್ಕೆ ಅಮೇಜ್ ಕಾರಿನ ಮೇಲೆ ನೀಡಲಾಗುತ್ತಿದೆ.

Category

🗞
News

Recommended