• 5 years ago
ಟಿವಿಎಸ್ ಮೋಟಾರ್ ಕಂಪನಿಯು ತನ್ನ ಸ್ಪೋರ್ಟ್ ಬಿಎಸ್ 6 ಬೈಕಿನ ಬೆಲೆಯನ್ನು ಹೆಚ್ಚಿಸಿದೆ. ಟಿವಿಎಸ್ ಸ್ಪೋರ್ಟ್ ಬಿಎಸ್ 6 ಪ್ರಯಾಣಿಕರ ಬೈಕಿನ ಬೆಲೆಯನ್ನು 750 ರೂಪಾಯಿಗಳಷ್ಟು ಏರಿಕೆ ಮಾಡಲಾಗಿದೆ. ಸ್ಪೋರ್ಟ್ ಬೈಕಿನ ಎರಡೂ ಮಾದರಿಗಳ ಬೆಲೆಯನ್ನು ಏರಿಕೆ ಮಾಡಲಾಗಿದೆ.

ಎಂಟ್ರಿ ಲೆವೆಲ್‌ನ ಟಿವಿಎಸ್ ಸ್ಪೋರ್ಟ್ ಬಿಎಸ್ 6 ಬೈಕ್ ಅನ್ನು ಕಿಕ್-ಸ್ಟಾರ್ಟ್ ಹಾಗೂ ಸೆಲ್ಫ್-ಸ್ಟಾರ್ಟ್ ಎಂಬ ಎರಡು ಮಾದರಿರಗಳಲ್ಲಿ ಮಾರಾಟ ಮಾಡಲಾಗುತ್ತದೆ. ಬೆಲೆ ಏರಿಕೆಯ ನಂತರ ಈ ಎರಡೂ ಮಾದರಿಗಳ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ದರದಂತೆ ಕ್ರಮವಾಗಿ 52,500 ಹಾಗೂ 59,675 ರೂಪಾಯಿಗಳಾಲಿದೆ.

ಟಿವಿಎಸ್ ಸ್ಪೋರ್ಟ್ ಬೈಕ್ ಅನ್ನು ಪ್ರೀಮಿಯಂ ಪ್ರಯಾಣಿಕರ ಬೈಕ್ ಆದ ರೇಡಿಯನ್ ಜೊತೆಗೆ ಮಾರಾಟ ಮಾಡಲಾಗುತ್ತದೆ. ಸ್ಪೋರ್ಟ್ ಬೈಕಿನಲ್ಲಿ 110 ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ.

Category

🗞
News

Recommended