• 5 years ago
ಜರ್ಮನಿ ಮೂಲದ ಖ್ಯಾತ ಬೈಕ್ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಮೋಟರ್‌ರಾಡ್ ಎಫ್ 900 ಆರ್ ಹಾಗೂ ಎಫ್ 900 ಎಕ್ಸ್‌ಆರ್ ಬೈಕ್‌ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.
ಹೊಸ 900 ಆರ್ ನೇಕೆಡ್ ರೋಡ್‌ಸ್ಟರ್ ಬೈಕಿನ ಬೆಲೆ ರೂ.9.90 ಲಕ್ಷಗಳಾದರೆ, 900 ಎಕ್ಸ್ಆರ್ ಅಡ್ವೆಂಚರ್ ಸ್ಪೋರ್ಟ್ ಟೂರರ್ ಬೈಕಿನ ಬೆಲೆ ರೂ.10.50 ಲಕ್ಷಗಳಾಗಿದೆ.

ಎಫ್ 900 ಎಕ್ಸ್‌ಆರ್ ಬೈಕ್ ಅನ್ನು ಸ್ಟ್ಯಾಂಡರ್ಡ್ ಹಾಗೂ ಪ್ರೊ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಪ್ರೊ ಮಾಡೆಲ್‌ಗಳ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.11.5 ಲಕ್ಷಗಳಾಗಿದೆ.
ಈ ಎರಡೂ ಬೈಕ್‌ಗಳು ಎಸ್ 1000 ಆರ್ ಹಾಗೂ ಎಸ್ 1000 ಎಕ್ಸ್‌ಆರ್ ಬೈಕ್‌ಗಳ ಕೆಳಗಿನ ಸ್ಥಾನದಲ್ಲಿರಲಿವೆ.

ಎಫ್ 900 ಆರ್ ಬೈಕ್ ಕೆಟಿಎಂ 790 ಡ್ಯೂಕ್ ಹಾಗೂ ಮತ್ತು ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್‌ಎಸ್ ಬೈಕ್‌ಗಳಿಗೆ ಪೈಪೋಟಿ ನೀಡಲಿದ್ದರೆ, ಎಫ್ 900 ಎಕ್ಸ್ಆರ್ ಡುಕಾಟಿ ಮಲ್ಟಿಸ್ಟ್ರಾಡಾ 950 ಹಾಗೂ
ಟ್ರಯಂಫ್ ಟೈಗರ್ 900 ಬೈಕ್‌ಗಳಿಗೆ ಪೈಪೋಟಿ ನೀಡಲಿದೆ.

Category

🚗
Motor

Recommended