• 5 years ago
ಕರೋನಾ ವೈರಸ್ ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿಯೂ ಹೆಚ್ಚು ಪರಿಣಾಮವನ್ನುಂಟು ಮಾಡಿದೆ. ವಿದೇಶಗಳಲ್ಲಿಯೂ ಸಹ ಮಾಲ್‌ ಹಾಗೂ ಥಿಯೇಟರ್‌ಗಳನ್ನು ಬಂದ್ ಮಾಡಲಾಗಿದೆ.
ಚಿತ್ರಮಂದಿರಗಳು ಬಂದ್ ಆದ ಕಾರಣಕ್ಕೆ ನಿರಾಶೆಗೊಂಡಿದ್ದ ದುಬೈ ಜನರಿಗೆ ಸಿಹಿ ಸುದ್ದಿಯೊಂದು ಹೊರ ಬಿದ್ದಿದೆ.

ದುಬೈನ ಚಿತ್ರ ಪ್ರೇಮಿಗಳು ಶೀಘ್ರದಲ್ಲೇ ವಿಶ್ವದ ಅತಿದೊಡ್ಡ ಶಾಪಿಂಗ್ ಮಾಲ್‌ ರೂಫ್ ಮೇಲೆ ಡ್ರೈವ್-ಇನ್ ಸಿನೆಮಾ ನೋಡಬಹುದು. ಜನರು ತಮ್ಮ
ಕಾರಿನಲ್ಲಿಯೇ ಕುಳಿತು ಸಿನಿಮಾ ವೀಕ್ಷಿಸ ಬಹುದು. ಇದರಿಂದ ಸಾಮಾಜಿಕ ಅಂತರವನ್ನು ಪೂರ್ಣ ಪ್ರಮಾಣದಲ್ಲಿ ಕಾಯ್ದುಕೊಳ್ಳಲಾಗುವುದು.

ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಯುನೈಟೆಡ್ ಅರಬ್ ಎಮಿರೇಟ್ಸ್ ಹೊರಡಿಸಿರುವ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು, ಕಾರಿನಲ್ಲಿ ಇಬ್ಬರು ಮಾತ್ರ ತೆರೆದ
ಸ್ಥಳಕ್ಕೆ ಹೋಗಲು ಅವಕಾಶವಿರುತ್ತದೆ ಎಂದು ವೋಕ್ಸ್ ಸಿನೆಮಾ ಹೇಳಿದೆ.

ವೋಕ್ಸ್ ಸಿನೆಮಾದ ಹೊಸ ಸಿನಿಮಾ ವೀಕ್ಷಣೆಯ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.

Category

🗞
News

Recommended