• 5 years ago
ಕವಾಸಕಿ ಇಂಡಿಯಾ ಮೋಟಾರ್‌ಸೈಕಲ್ ಸದ್ದಿಲ್ಲದೇ ತನ್ನ ವರ್ಸಿಸ್ 1000 ಬಿಎಸ್ 6 ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಟೂರಿಂಗ್ ಬೈಕಿನ ಬೆಲೆ ಭಾರತದ ಎಕ್ಸ್‌ಶೋರೂಂ ದರದಂತೆ
ರೂ.10.99 ಲಕ್ಷಗಳಾಗಿದೆ. ಬಿಎಸ್ 6 ಆವೃತ್ತಿಯ ಬೆಲೆ ಬಿಎಸ್ 4 ಆವೃತ್ತಿಗಿಂತ ರೂ.10,000ಗಳಷ್ಟು ಹೆಚ್ಚಾಗಿದೆ.

ಎಂಜಿನ್ ಅಪ್‌ಡೇಟ್‌ನ ಹೊರತಾಗಿ, ಈ ಬೈಕಿನ ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಜೊತೆಗೆ ಯಾವುದೇ ಹೊಸ ಫೀಚರ್‌ಗಳನ್ನು ಅಳವಡಿಸಿಲ್ಲ. 2020ರ ವರ್ಸಿಸ್ 1000 ಬೈಕ್ ಅನ್ನು
ಪರ್ಲ್ ಸ್ಟಾರ್‌ಡಸ್ಟ್ ವೈಟ್ / ಮೆಟಾಲಿಕ್ ಸ್ಪಾರ್ಕ್ ಬ್ಲ್ಯಾಕ್ ಹಾಗೂ ಕ್ಯಾಂಡಿ ಲೈಮ್ ಗ್ರೀನ್ / ಮೆಟಾಲಿಕ್ ಸ್ಪಾರ್ಕ್ ಬ್ಲ್ಯಾಕ್ ಎಂಬ ಎರಡು ಡ್ಯುಯಲ್-ಟೋನ್ ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಕವಾಸಕಿ ವರ್ಸಿಸ್ 1000 ಬಿಎಸ್ 6 ಬೈಕಿನಲ್ಲಿ 1,043 ಸಿಸಿಯ ಲಿಕ್ವಿಡ್-ಕೂಲ್ಡ್, ಇನ್-ಲೈನ್ ಫೋರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 9,000 ಆರ್‌ಪಿಎಂನಲ್ಲಿ 118 ಬಿಹೆಚ್‌ಪಿ ಪವರ್ ಹಾಗೂ
7,500 ಆರ್‌ಪಿಎಂನಲ್ಲಿ 102 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

Category

🗞
News

Recommended