• 6 years ago
ಬಿಲ್ಲಿನಂತಹ ಉಬ್ಬು, ಹೊಳೆಯುವ ಕಣ್ಣು, ಆಕರ್ಷಕವಾದ ತುಟಿ ಇವುಗಳು ಹೆಣ್ಣಿನ ಮುಖದ ಸೌಂದರ್ಯ ಹೆಚ್ಚಿಸುವ ಮುಖ್ಯ ಅಂಶಗಳಾಗಿವೆ. ಎಷ್ಟೇ ಸೌಂದರ್ಯವಿರಲಿ, ಆ ಸೌಂದರ್ಯಕ್ಕೆ ಲಘವಾದ ಮೇಕಪ್ ಇದ್ದರೆ ಮಾತ್ರ ತುಂಬಾ ಆಕರ್ಷಕವಾಗಿ ಕಾಣುವುದು. ಅದರಲ್ಲೂ ಕಣ್ಣು ಮತ್ತು ಉಬ್ಬಿನ ಅಲಂಕಾರ ಮಾಡಿದರೆ ಸರಳ ಮತ್ತು ಸುಂದರವಾಗಿ ಕಾಣಬಹುದು. ಈ ರೀತಿ ಕಣ್ಣು ಮತ್ತು ಉಬ್ಬಿನ ಮೇಕಪ್ ಗೆ ಅನೇಕ ಸಾಧನಗಳಿವೆ. ಆದರೆ ಇವುಗಳೆನ್ನೆಲ್ಲಾ ದೂರ ಪ್ರಯಾಣ ಮಾಡುವಾಗ ಎಲ್ಲಾ ಮೇಕಪ್ ಕಿಟ್ಸ್ ಜೊತೆಯಲ್ಲಿಯೆ ತೆಗೆದುಕೊಂಡು ಹೋಗಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಮುಖಕ್ಕೆ ಹಚ್ಚುವ ಕ್ರೀಮ್ ಮತ್ತು ಐಲೈನರ್ ಮಾತ್ರ ಬಳಸಿ ಮುಖದ ಅಂದ ಹೆಚ್ಚಿಸಬಹುದು. ಐಲೈನರ್ ಬಳಸಿ ಕಣ್ಣಿನ ಮೇಕಪ್ ಮುಗಿಸಬಹುದು. ಇದನ್ನು ಕಣ್ಣು ರೆಪ್ಪೆಗಳ ಅಲಂಕಾರಕ್ಕೆ ಮಸ್ಕರಾ ರೀತಿ ಉಪಯೋಗಿಸಬಹುದು. ಕಾಜಲ್ ರೀತಿ ಕೂಡ ಬಳಸಬಹುದು. ಐಲೈನರ್ ಬಳಸಿ ಆಕರ್ಷಕವಾದ ಬಿಂದಿಗಳನ್ನು ಹಾಕಬಹುದು. ಐಲೈನರ್ ಬಳಸಿ ಬಿಂದಿ ಹಾಕಿದರೆ ಅದು ಹರಡುತ್ತದೆ ಎಂಬ ಭಯವಿರುವುದಿಲ್ಲ. ತೆಳುವಾದ ಹುಬ್ಬುಗಳಿದ್ದರೆ ಐಲೈನರ್ ಅನ್ನು ಹುಬ್ಬುಗಳಿಗೆ ತೆಳುವಾಗಿ ಹಚ್ಚಬೇಕು. ಗಾಢವಾಗಿ ಹಚ್ಚಿದರೆ ವಿಚಿತ್ರವಾಗಿ ಕಾಣಬಹುದು. ಆದ್ದರಿಂದ ಹಚ್ಚುವಾಗ ಸ್ವಲ್ಪ ಜಾಗ್ರತೆವಹಿಸಿ ಹಚ್ಚಬೇಕು...ಬನ್ನಿ ಇಂತಹ ಹಲವಾರು ವಿಭಿನ್ನ ಶೈಲಿಯ ಐ ಲೈನರ್ ಅನ್ನು ಈ ವಿಡಿಯೋದಲ್ಲಿ ನೀಡಿದ್ದೇವೆ ನೀವೂ ವೀಕ್ಷಿಸಿ...

Recommended