• 7 years ago
ವಿವಿಧ ಹಣ್ಣುಗಳನ್ನು ತ್ವಚೆಯ ಕಾಂತಿಯ ಕ್ರೀಮ್ ಹಾಗೂ ಮಾಸ್ಕ್‌ಗಳಲ್ಲಿ ಬಳಸುವುದನ್ನು ನಾವು ತಿಳಿದುಕೊಂಡಿದ್ದೇವೆ. ಅದೇ ರೀತಿ ಪಪ್ಪಾಯಿಯನ್ನು (ಪರಂಗಿ ಹಣ್ಣು) ಕೂಡ ತ್ವಚೆಯ ಆರೈಕೆಗಾಗಿ ಬಳಸಬಹುದು. ಇದು ತ್ವಚೆಗೆ ಕಾಂತಿ ನೀಡುವುದು ಮಾತ್ರವಲ್ಲದೆ ಚರ್ಮವನ್ನು ಸ್ವಚ್ಛಗೊಳಿಸುತ್ತದೆ. ಇದರಲ್ಲಿರುವ ಪಪೈನ್ ಎನ್ನುವ ಅಂಶವು ಚರ್ಮವನ್ನು ಪುನಶ್ಚೇತನಗೊಳಿಸುತ್ತದೆ. ಪಪೈನ್ ಸತ್ತ ಚರ್ಮವನ್ನು ಕಿತ್ತು ಹಾಕಿ ಹೊಸ ಕೋಶಗಳನ್ನು ಉಂಟುಮಾಡುವುದು. ಪಪ್ಪಾಯಿಯ ಸೋಪ್ ಹಾಗೂ ಮೊಶ್ಚಿರೈಸರ್ ಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಪಪ್ಪಾಯಿಯನ್ನು ಸ್ಕ್ರಬ್ ಅಥವಾ ಮಾಸ್ಕ್ ಆಗಿ ಬಳಕೆ ಮಾಡುವುದರಿಂದ ಮುಖದಲ್ಲಿನ ಕಲೆಗಳು, ಮೊಡವೆಗಳು ಹಾಗೂ ವಯಸ್ಸಾಗುವ ಲಕ್ಷಣಗಳನ್ನು ದೂರ ಮಾಡಬಹುದು. ಪಪ್ಪಾಯವು ಪೋಷಕಾಂಶಗಳು, ಜೀವಸತ್ವಗಳು ಮತ್ತು ಖನಿಜಗಳ ಸಮೃದ್ಧ ಮೂಲವಾಗಿದೆ, ಅದು ದೇಹ ವ್ಯವಸ್ಥೆಯನ್ನು ಸೂಕ್ತವಾಗಿ ಇರಿಸಿಕೊಳ್ಳುತ್ತದೆ ಹಾಗೂ ಜೀರ್ಣಕ್ರಿಯೆಗೆ ಅತ್ಯುತ್ತಮವಾಗಿದೆ, ಪಪ್ಪಾಯವನ್ನು ಫೇಸ್ ಪ್ಯಾಕ್ ರೂಪದಲ್ಲಿ ಬಳಸಿದಾಗ ಇದು ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಪಪ್ಪಾಯವು ಪೇಪೈನ್ ಎಂಬ ಪ್ರಮುಖ ಜೈವಿಕ ಯೋಗವಾಹಕವನ್ನು(ಎನ್ ಝೈಮ್) ಹೊಂದಿದೆ. ಇದು ಎಫ್ಫೋಲಿಯೇಟರ್ ಆಗಿ ಕಾರ್ಯನಿರ್ವಹಿಸಿ ಹಾನಿಗೊಳಗಾದ ಚರ್ಮವನ್ನು ಹೊಳಪು ಮಾಡಲು ಸಹಾಯ ಮಾಡುತ್ತದೆ.

Recommended