ಮನೆಯಲ್ಲಿಯೇ ಮಾಡಬಹುದಾದ ನೈಸರ್ಗಿಕ ಕೂದಲಿನ ಎಣ್ಣೆ | Boldsky

  • 6 years ago
ದಟ್ಟವಾದ ಕಪ್ಪಗಿನ ಹೊಳೆಯುವ ಕೂದಲು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಪ್ರತಿಯೊಬ್ಬ ಮಹಿಳೆಯ ಕನಸೂ ಕೂಡ ಉದ್ದನೆಯ ದಪ್ಪನೆಯ ಕೂದಲನ್ನು ಪಡೆಯುವುದಾಗಿದೆ. ಹೊಳಪಿನ ಕೂದಲು ಪಡೆಯ ಬೇಕೆಂದು ಎಲ್ಲ ಹೆಂಗಸರೂ ಕಸರತ್ತು ಮಾಡುತ್ತಾರೆ. ಮಾರುಕಟ್ಟೆಯಲ್ಲಿ ಬರುವ ವಿಧ ವಿಧ ಕೇಶ ತೈಲಗಳು ಆಯುರ್ವೇದಿಕ್ ಮನೆ ಮದ್ದುಗಳನ್ನು ಬಳಸಿ ದಪ್ಪನೆಯ ಕೂದಲು ಪಡೆಯುವ ಮಹದಾಸೆಯನ್ನು ಹೊಂದಿರುತ್ತಾರೆ. ಆದರೆ ಎಷ್ಟೇ ಕರಾಮತ್ತು ಮಾಡಿದರೂ ಧೂಳು, ವಾಯುಮಾಲಿನ್ಯ ಮೊದಲಾದ ಕಾರಣಗಳಿಂದ ಕೂದಲು ತನ್ನ ಸ್ವಾಸ್ಥ್ಯವನ್ನು ಕಳೆದುಕೊಳ್ಳುತ್ತದೆ. ಕೂದಲು ಉದುರುವುದು, ಸೀಳು ಕೂದಲು, ಕೂದಲು ತುಂಡಾಗುವಿಕೆ ಮೊದಲಾದ ಸಮಸ್ಯೆಗಳಿಗೆ ಇಂದಿನ ಹೆಚ್ಚಿನ ಮಹಿಳೆಯರು ಒಳಗಾಗುತ್ತಿದ್ದಾರೆ. ಆದರೆ ನೈಸರ್ಗಿಕವಾಗಿ ಕೂದಲಿನ ಈ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವುದು ಹೇಗೆ ಎಂಬುದನ್ನು ಇಂದಿನ ಈ ವಿಡಿಯೋದಲ್ಲಿ ತೋರಿಸುತ್ತಿದ್ದೇವೆ... ಅದಕ್ಕೆ ಬೇಕಾಗುವ ಸಾಮಾಗ್ರಿಗಳು, ಕರಿಬೇವಿನ ಎಲೆಗಳು, ತೆಂಗಿನ ಎಣ್ಣೆ ಹಾಗೂ ಈರುಳ್ಳಿ... ಈ ಮೂರು ಸಾಮಾಗ್ರಿಗಳಿಂದ ಮಾಡಿದ ಎಣ್ಣೆಯು ನಿಮ್ಮೆಲ್ಲಾ ಕೂದಲಿನ ಸಮಸ್ಯೆಯನ್ನು ನಿವಾರಿಸುತ್ತದೆ

Recommended