ಶ್ರೀದೇವಿ 3 ದಿನಗಳ ಕಾಲ ಒಬ್ಬಂಟಿಯಾಗಿ ದುಬೈ ನಲ್ಲಿ ಇದ್ದಿದ್ಯಾಕೆ? | Filmibeat Kannada

  • 6 years ago
Why did Bollywood Actress Sridevi stayed back at Dubai even after Mohit Marwah's wedding? Here is an answer from Sridevi's husband Boney Kapoor


ಬೋನಿ ಕಪೂರ್ ಹಾಗೂ ಶ್ರೀದೇವಿ ಸಂಬಂಧಿ ಮೋಹಿತ್ ಮಾರ್ವಾ ಮದುವೆ ನಡೆದಿದ್ದು ಫೆಬ್ರವರಿ 20 ಮಂಗಳವಾರ ದುಬೈನಲ್ಲಿ. ಶ್ರೀದೇವಿ ಕೊನೆಯುಸಿರೆಳೆದಿದ್ದು ಫೆಬ್ರವರಿ 24 ಶನಿವಾರ. ಮಧ್ಯ ಮೂರು ದಿನಗಳ ಕಾಲ ಶ್ರೀದೇವಿ ದುಬೈನಲ್ಲಿನ ಹೋಟೆಲ್ ವೊಂದರಲ್ಲಿ ತಂಗಿದ್ದರು. ಮೋಹಿತ್ ಮಾರ್ವಾ ಮದುವೆ ಮುಗಿದ್ಮೇಲೆ, ಶ್ರೀದೇವಿ ದುಬೈನಲ್ಲೇ ಒಬ್ಬಂಟಿಯಾಗಿ ಉಳಿದುಕೊಂಡರೆ, ಪತಿ ಬೋನಿ ಕಪೂರ್ ಮಾತ್ರ ಭಾರತಕ್ಕೆ ವಾಪಸ್ ಬರುತ್ತಾರೆ. ಅಷ್ಟಕ್ಕೂ, ಮದುವೆ ಮುಗಿದರೂ ಶ್ರೀದೇವಿ ದುಬೈನಲ್ಲೇ ಉಳಿದುಕೊಂಡಿದ್ದು ಯಾಕೆ.? ಮೂರು ದಿನಗಳ ಕಾಲ ಹೋಟೆಲ್ ರೂಮ್ ನಿಂದ ಹೊರಗೆಲ್ಲೂ ಶ್ರೀದೇವಿ ಬರಲೇ ಇಲ್ಲ. ಇದಕ್ಕೆ ಕಾರಣ ಏನು? ಈ ಅನುಮಾನಕ್ಕೆ ಈಗ ಕ್ಲಾರಿಟಿ ಸಿಕ್ಕಿದೆ. ದುಬೈನಲ್ಲಿ ಶ್ರೀದೇವಿ ಉಳಿದುಕೊಂಡ್ಮೇಲೆ ಏನೇನಾಯ್ತು ಎಂಬುದರ ಬಗ್ಗೆ ಬೋನಿ ಕಪೂರ್ ಮೌನ ಮುರಿದಿದ್ದಾರೆ.

Recommended