ನಿಮಿಶಾಂಬ ದೇವಾಲಯ, ಮೈಸೂರು : ನಿಮಿಶಾಂಬ ದೇವಿಯ ಹಿನ್ನೆಲೆ | Oneindia Kannada

  • 6 years ago
"Nimisha" means a minute, the Goddess who resides in this temple is believed to grant the wishes of her devotees in a minute. Nimishamba is another form of Goddess Parvathi, the temple is located on the banks of river Cauvery. The temple was built during the reign of Mummadi Krishnaraja Wodeyar around 400 years ago. There is a Sree Chakra imprinted in stone which is placed in front of the Goddess. The temple has a relatively small sanctum with a seven storied grand entrance tower. The Sree Chakra is believed to be inscribed by a King called Muktharaja on a stone, who later went into self-mortification.



ನಮ್ಮ ಕರ್ನಾಟಕದಲ್ಲಿ ಅನೇಕ ದೇವಾಲಯಗಳಿವೆ. ಒಂದೊಂದು ದೇವಾಲಯವು ತನ್ನದೇ ಆದ ಶಕ್ತಿ ಹಾಗು ಮಹಿಮೆಯನ್ನು ಹೊಂದಿದೆ. ಆ ಸಾಲಿನಲ್ಲಿ ಮೈಸೂರಿನ ಶ್ರೀರಂಗ ಪಟ್ಟಣದಲ್ಲಿರುವ ನಿಮಿಷಾಂಬ ದೇವಿಯ ದೇವಾಲಯವು ಒಂದು. ನಿಮಿಷ ಎಂದರೆ ಒಂದು ಕ್ಷಣ. ಅಂದರೆ ಇಲ್ಲಿನ ದೇವಿಯು ಭಕ್ತರ ಕಷ್ಟಗಳನ್ನು ನಿಮಿಷದಲ್ಲಿ ಪರಿಹಾರ ನೀಡುವ ತಾಯಿ ಎಂದೇ ಪ್ರಸಿದ್ಧಿ ಹೊಂದಿದ್ದಾಳೆ. ಈಕೆಯು ಪಾರ್ವತಿಯ ಸ್ವರೂಪವೇ ಆಗಿದ್ದಾಳೆ. ಈ ಮಹಿಮೆಯುಳ್ಳ ದೇವಾಲಯವು ಕಾವೇರಿ ನದಿ ದಂಡೆಯ ಮೇಲಿದೆ. ಈಕೆಯನ್ನು ದರ್ಶನ ಮಾಡುವ ಸಲುವಾಗಿ ಅನೇಕ ರಾಜ್ಯಗಳಿಂದ ಭೇಟಿ ನೀಡುತ್ತಿರುತ್ತಾರೆ. ಪವಿತ್ರವಾದ ಕಾವೇರಿ ನದಿಯ ಮೇಲೆ ನೆಲೆಸಿರುವ ಈ ತಾಯಿಯ ದೇವಾಲಯವು ಶ್ರೀರಂಗಪಟ್ಟಣದಿಂದ ಕೇವಲ 2 ಕಿ.ಮೀ ದೂರದಲ್ಲಿದೆ. ಇದೊಂದು ಸುಪ್ರಸಿದ್ಧ ದೇವಾಲಯ ಕೂಡ ಆಗಿದೆ. ಶ್ರೀ ನಿಮಿಷಾಂಬಳನ್ನು ಶಿವನ ಪತ್ನಿಯಾದ ಪಾರ್ವತಿಯ ಅವತಾರವೆಂದೇ ಪರಿಗಣಿಸಲಾಗಿದೆ. ಈ ಸ್ಥಳವು ಅತ್ಯಂತ ಪವಿತ್ರವಾದುದು ಎಂದು ನಂಬಲಾಗಿದೆ.ಕೆಲವರು ಹೇಳುವ ಪ್ರಕಾರ, ಯಾರು ಈ ದೇವಿಯ ನೆಲೆಯಲ್ಲಿ ನಿಂತು ದೇವಿಯನ್ನು ಮನದಲ್ಲಿ ಅತಿ ಶೃದ್ಧೆ ಹಾಗೂ ಭಕ್ತಿಗಳಿಂದ ಪ್ರಾರ್ಥಿಸುತ್ತಾರೊ ಅವರಿಗೆ ನಿಮಿಷ ಮಾತ್ರದಲ್ಲೆ ಅಲೌಕಿಕ ಆನಂದ ಉಂಟಾಗುತ್ತದೆಯಂತೆ. ಹಾಗಾಗಿ ಈಕೆಯನ್ನು ನಿಮಿಷಾಂಬಿಕೆ ಅಥವಾ ನಿಮಿಷಾಂಬಾ ಎಂದೂ ಸಹ ಕರೆಯುತ್ತಾರೆ ಎಂದು ಹೇಳಲಾಗುತ್ತದೆ. ಆದರೆ ಸ್ಥಳ ಪುರಾಣ ಹೇಳುವ ಕಥೆಯೆ ಇನ್ನೊಂದು!

Recommended