ಬಿಜೆಪಿಯ ಆರೋಗ್ಯ ಸಚಿವ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ | Oneindia Kannada

  • 6 years ago
The Congress on Feb 15th mocked the Bharatiya Janata Party (BJP) government in Rajasthan after a photo of state Health Minister Kalicharan Saraf urinating on the walls of Jaipur in Rajasthan went viral


ಒಂದೆಡೆ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಸ್ವಚ್ಛ ಭಾರತ ಎಂದು ಬೊಬ್ಬೆ ಹೊಡೆಯುತ್ತಿದೆ. ಆದರೆ ಬಿಜೆಪಿಯ ಸಚಿವರೊಬ್ಬರು ಸಾರ್ವಜನಿಕ ಸ್ಥಳದಲ್ಲಿ, ಅದರಲ್ಲೂ ಗೋಡೆಯ ಮೇಲೆ ಮೂತ್ರ ವಿಸರ್ಜನೆ ಮಾಡುವ ಮೂಲಕ ಸ್ವಚ್ಛ ಭಾರತ ಎಂಬ ಪರಿಕಲ್ಪನೆಗೆ ಅವಮಾನ ಮಾಡಿದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಇನ್ನೂ ವಿಪರ್ಯಾಸ ಎಂದರೆ ಇವರು ರಾಜಸ್ಥಾನದ ಆರೋಗ್ಯ ಸಚಿವರು! ಹೌದು ಆರೋಗ್ಯ ಸಚಿವ ಕಳಿಚರಣ್ ಸರಾಫ್ ಎಂಬುವವರು ಸಾರ್ವಜನಿಕ ಸ್ಥಳದಲ್ಲಿಯೇ ಮೂತ್ರ ವಿಸರ್ಜನೆ ಮಾಡುತ್ತಿರುವ ದೃಶ್ಯವನ್ನು ಯಾರೋ ಫೋಟೋ ತೆಗೆದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾರೆ. ಈ ಚಿತ್ರವೀಗ ವೈರಲ್ ಆಗಿದ್ದು, ಸ್ವಚ್ಛ ಭಾರತದ ಬಗ್ಗೆ ಮಾತನಾಡುವವರ ಅಸಲಿಯತ್ತು ಇದು ನೋಡಿ ಎಂದು ಲೇವಡಿ ಮಾಡುತ್ತಿದ್ದಾರೆ!