ನಮ್ಮ ಮೆಟ್ರೋ ಸುರಂಗ ಮಾರ್ಗದ ಕಾಮಗಾರಿ ಶೀಘ್ರ ಆರಂಭ | Oneindia Kannada

  • 6 years ago
ನಮ್ಮ ಮೆಟ್ರೋ ಎರಡನೇ ಹಂತದಲ್ಲಿ ಸುರಂಗ ಮಾರ್ಗಕ್ಕೆ ಸಾಲ ನೀಡಿರುವ ಯುರೋಪಿಯನ್ ಇನ್ವೆಸ್ಟ ಮೆಂಟ್ ಬ್ಯಾಂಕ್ ನ ಪ್ರತಿನಿಧಿಗಳು ಬಿಎಂಆರ್ ಸಿಎಲ್ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದರಿಂದ ಈ ಮಾರ್ಗದ ಟೆಂಡರ್ ಪ್ರಕ್ರಿಯೆ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

21.42 ಕಿ.ಮೀ ಉದ್ದದ ಗೊಟ್ಟಿಗೆರೆ-ನಾಗವಾರ ಮಾರ್ಗದಲ್ಲಿ13.91 ಕಿ,ಮೀ ಉದ್ದದ ಮಾರ್ಗವು ಸುರಂಗ ಮಾರ್ಗವಾಗಿರಲಿದೆ. ಈ ಮಾರ್ಗಕ್ಕೆ ಕಳೆದ ಜುಲೈನಲ್ಲೇ 3,905,55ಕೋಟಿ ರೂ. ಮೊತ್ತದ ಟೆಂಡರ್ ಕರೆಯಲಾಗಿತ್ತು. ಈ ಒಟ್ಟು ಮಾರ್ಗಕ್ಕೆ ಯುರೋಪಿಯನ್ ಇನ್ವೆಸ್ಟ ಮೆಂಟ್ ಬ್ಯಾಂಕ್ 3,770 ಕೋಟಿ ರೂ. ಸಾಲ ನೀಡಿದೆ.

ಟೆಂಡರ್ ಅನ್ನು ಸೂಕ್ತ ಗುತ್ತಿಗೆದಾರರಿಗೆ ನೀಡುವ ಬಗ್ಗೆ ಈ ಸಂಸ್ಥೆಗೆ ಮಾಹಿತಿ ನೀಡಬೇಕಿದೆ. ಇತ್ತೀಚೆಗೆ ಬಿಎಂಆರ್ಸಿಎಲ್ ಗೆ ಭೇಟಿ ನೀಡಿದ ಬ್ಯಾಂಕ್ ಪ್ರತಿನಿಧಿಗಳು ಮಾರ್ಗದ ಕಾಮಗಾರಿಗೆ ನಡೆಸಿರುವ ಸಿದ್ಧತೆ ಹಾಗೂ ಟೆಂಡರ್ ಪ್ರಕ್ರಿಯೆಯನ್ನು ಪರಿಶೀಲಿಸಿದ್ದಾರೆ.
Namma Metro's 2nd phase tunnel construction is about to start . And this time the lenght of the tunnel will be more when compared to the first phase tunnel

Recommended