ನಿಮ್ಮ ನ್ಯೂ ಇಯರ್ ಪಾರ್ಟಿಯನ್ನ ಹಾಳು ಮಾಡೋಕೆ ಬೆಂಗಳೂರು ಪೊಲೀಸ್ ರೆಡಿ | Oneindia Kannada

  • 6 years ago
Bengaluru traffic police are ready to spoil your new year party, if you are found driving the vehicle under the influence of liquor. Don't take message by R Hithendra (@AddlCPTraffic) lightly. So, be careful, don't play with your life and others.



"ನಿಮ್ಮ ವರ್ಷಾಂತ್ಯದ ಪಾರ್ಟಿಯನ್ನು ಹಾಳುಗೆಡವಲು ಬೆಂಗಳೂರು ಪೊಲೀಸರು ಸನ್ನದ್ಧರಾಗಿದ್ದಾರೆ!" ಹೀಗೊಂದು ಇಂಟ್ರೆಸ್ಟಿಂಗ್ ಸಂದೇಶವನ್ನು ಹೆಚ್ಚುವರಿ ಪೊಲೀಸ್ ಆಯುಕ್ತ (ಟ್ರಾಫಿಕ್) ಹಿತೇಂದ್ರ ಅವರು ಹಾಕಿದ್ದಾರೆ.ಈ ಸಂದೇಶವನ್ನು ಅಪಾರ್ಥ ಮಾಡಿಕೊಳ್ಳುವ ಮೊದಲು, ಅವರು ಹೀಗೇಕೆ ಹೇಳುತ್ತಿದ್ದಾರೆ, ಈ ಹೇಳಿಕೆಯ ಹಿಂದಿನ ಉದ್ದೇಶ ಏನು ಎಂಬುದನ್ನು ಬೆಂಗಳೂರಿನ ಜನತೆ ಚೆನ್ನಾಗಿ ಅರಿಯಬೇಕು.ಹೊಸ ವರ್ಷದ ಆಚರಣೆಯಲ್ಲಿ ಭಾಗವಹಿಸಲು ಯುವ ಹೃದಯಗಳು ಕುಣಿಯುತ್ತಿರುತ್ತಿದ್ದರೆ, ಹಿರಿ ಜೀವಗಳ ಹೃದಯ ಢವಢವ ಎನ್ನುತ್ತಿರುತ್ತದೆ. ಪಾರ್ಟಿಗೆಂದು ಹೋದ ಮಗ ಸುರಕ್ಷಿತವಾಗಿ ಬರಲಿ ಎಂದು ರಾತ್ರಿ ಎರಡು ಗಂಟೆಯವರೆಗೆ ತಂದೆ ತಾಯಿಯರು ಎದ್ದು ಕುಳಿತಿರುತ್ತಾರೆ.ವರ್ಷಾಂತ್ಯದ ಪಾರ್ಟಿಯಲ್ಲಿ ಕಳೆದುಹೊಗುವ ಮುನ್ನ ಕಳೆದ ವರ್ಷ ಏನಾಗಿತ್ತೆಂದು ಒಮ್ಮೆ ಮೆಲುಕು ಹಾಕುವುದು ಉತ್ತಮ. ಹುಚ್ಚು ಮದವೇರಿದ ಪಡ್ಡೆಗಳ ಮಧ್ಯದಲ್ಲಿ ಕನಕಾಂಗಿಯರು ನಲುಗಿ ಹೋಗಿದ್ದರು. ಕೆಲ ಮಹಿಳೆಯರ ಮೇಲೆ ನಡೆಯಬಾರದ್ದು ನಡೆದುಹೋಗಿತ್ತು.

Recommended