ನಿಮ್ಮ ಒಂದು ವಾಟ್ಸ್ ಆಪ್ ಮೆಸೇಜ್ ನಿಮ್ಮನ್ನ ಜೈಲಿಗೆ ತಳ್ಳಬಹುದು ಎಚ್ಚರ! | Oneindia Kannada

  • 7 years ago
ಜೋಕೆ, ಒಂದು Whatsapp ಮೆಸೇಜ್ ನಿಮ್ಮನ್ನು ಜೈಲಿಗೆ ತಳ್ಳಬಹುದು! ಉದ್ವೇಗದಲ್ಲಿ whatsapp ನಲ್ಲಿ ಮಾಡಿದ ಒಂದು ಮೆಸೇಜ್ ಗೆ ನಿಮ್ಮನ್ನು ಜೈಲಿಗೂ ತಳ್ಳುವಷ್ಟು ತಾಕತ್ತಿದೆ! ತಮಾಷೆಯಲ್ಲ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯಗಳನ್ನು 'ಸೆನ್ಸಾರ್' ಇಲ್ಲದೆ ಹಂಚಿಕೊಂಡ ಹಲವರು ಈಗಾಗಲೇ ಕಂಬಿ ಎಣಿಸಿಬಂದಿದ್ದಾರೆ, ಎಣಿಸುತ್ತಿದ್ದಾರೆ ಕೂಡ. ಯಾವುದೇ ವಿವಾದಾತ್ಮಕ ವಿಷಯಗಳ ಕುರಿತು ಸಂದೇಶ ಕಳಿಸುವ ಮುನ್ನ ಹತ್ತುಬಾರಿ ಯೋಚಿಸಬೇಕಾದ ಅಗತ್ಯವಿದೆ ಎಂಬುದಂತೂ ಸತ್ಯ! ಹೇಳಿ ಕೇಳಿ ಇದು ಸೋಶಿಯಲ್ ಮೀಡಿಯಾ ಕಾಲ. ಬೆಳಗ್ಗೆ ಕಣ್ಣು ಬಿಡುತ್ತಿದ್ದ ಹಾಗೇ ವಾಟ್ಸ್ ಆಪ್, ಫೇಸ್ ಬುಕ್ ದರ್ಶನವಾಗಲೇಬೇಕು. ಒಂದು ನಿಮಿಷ ಇಂಟರ್ನೆಟ್ ಕೈಕೊಟ್ಟರೆ ಏನೋ ತಳಮಳ! ಹಲವು ಸಂದರ್ಭಗಳಲ್ಲಿ ಸರ್ಕಾರ ಮತ್ತು ಸಾರ್ವಜನಿಕರ ನಡುವಿನ ಸಂಪರ್ಕ ಸೇತುವೆಯಾಗಿರುವ, ಸೆಲೆಬ್ರಿಟಿಗಳೂ ಶ್ರೀಸಾಮಾನ್ಯರ ಕೈಗೆಟುಕುವಂತೆ ಮಾಡುವ ಕೊಂಡಿಯಾಗಿರುವ ಸಾಮಾಜಿಕ ಮಾಧ್ಯಮಗಳು ಹಲವು ಬಾರಿ ಸೆನ್ಸೇಶನ್ ಸೃಷ್ಟಿಸುವಲ್ಲಿಯೂ ಹಿಂದೆಬಿದ್ದಿಲ್ಲ. ಇದೇ ಕಾರಣಕ್ಕೇ ಹಲವು ಅಹಿತಕರ ಘಟನೆಗಳೂ ನಡೆದಿವೆ.
According to Section 66A of the Information and Technology Act, any person who sends controversial message which hurts a community or person or a caste etc, by means of a computer resource or a communication device, is an punishable offense.

Recommended